ಚೀನಾ ಗಡಿಯ ಹೊಸ ನಗರಕ್ಕೆ ಬಂದ ಉತ್ತರ ಕೊರಿಯಾ ಸರ್ವಾಧಿಕಾರಿ!

masthmagaa.com:

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಚೀನಾ ಗಡಿ ಬಳಿ ನಿರ್ಮಾಣವಾಗ್ತಿರೋ ಹೊಸ ನಗರಕ್ಕೆ ಭೇಟಿ ನೀಡಿದ್ದಾರೆ. ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿರೋ ಕಿಮ್ ಜಾಂಗ್ ಉನ್, ಉದ್ದವಾದ ಕಪ್ಪು ಕಲರ್ ಲೆದರ್ ಜಾಕೆಟ್ ಹಾಕ್ಕೊಂಡು ಮಿಂಚಿದ್ದಾರೆ. ಅಂದಹಾಗೆ ಸಮ್​ಜಿಯೋನ್ ಅನ್ನೋ ಈ ನಗರವನ್ನು ದೊಡ್ಡ ಆರ್ಥಿಕತೆಯ ಹಬ್ ಅನ್ನಾಗಿ ರೂಪಿಸಲಾಗ್ತಿದೆ. ಅಪಾರ್ಟ್​​ಮೆಂಟ್, ಹೋಟೆಲ್, ರೆಸಾರ್ಟ್​, ಸಾಂಸ್ಕೃತಿಕ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ನಿರ್ಮಿಸಲಾಗ್ತಿದೆ. ಕಿಮ್​​ ಜಾಂಗ್ ಉನ್​​​​ ಕುಟುಂಬಸ್ಥರು ಗೌರವಿಸೋ ಪವಿತ್ರ ಪರ್ವತ ಮೌಂಟ್ ಪಯೇಕ್ತು ಕೂಡ ಇದೇ ಭಾಗದಲ್ಲಿದೆ. 2018ರ ಬಳಿಕ ಕಿಮ್ ಜಾಂಗ್ ಉನ್ ಹಲವಾರು ಬಾರಿ ಈ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ. ಈ ನಗರ ನಿರ್ಮಾಣ ಕಾರ್ಯ ಕೊರೋನಾ ಮತ್ತು ಅಂತಾರಾಷ್ಟ್ರೀಯ ನಿರ್ಬಂಧದಿಂದಾಗಿ ತಡವಾಗ್ತಿದೆ. ಹೀಗಾಗಿ ಕೆಲಸ ಹೇಗ್ ನಡೀತಿದೆ. ಎಷ್ಟಾಗಿದೆ ಅಂತ ಇನ್​ಸ್ಪೆಕ್ಷನ್ ಮಾಡೋಕೆ ಕಿಮ್ ಜಾಂಗ್ ಉನ್ ಈ ಭೇಟಿ ನೀಡಿದ್ದಾರೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply