ನಟಿಯರಿಗಷ್ಟೇ ಅಲ್ಲ, ನನಗೂ ಕಾಸ್ಟಿಂಗ್‌ ಕೌಚ್‌ ಅನುಭವ ಆಗಿದೆ : ಶಿವು ಠಾಕ್ರೆ!

masthmagaa.com

ಮರಾಠಿಯ ಬಿಗ್‌ಬಾಸ್‌ ಸೀಸನ್‌ 16ರ ರನ್ನರ್‌ ಅಪ್‌ ಆದ ಶಿವ ಠಾಕರೆ ಯಾವಾಗಲೂ ತಮ್ಮ ಫ್ಯಾನ್ಸ್‌ಗಳ ಜೊತೆ ಹಾನೆಸ್ಟ್‌ ಆಗಿ ಇರ್ತಾರೆ. ಇದೀಗ ಸಂದರ್ಶನವೊಂದರಲ್ಲಿ ತಮಗಾದ ಕೆಲವೊಂದು ಅಹಿತಕರ ಘಟನೆಗಳ ಬಗ್ಗೆ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಸಿನಿಮಾ ಇಂಡಸ್ಟ್ರಿಯಲ್ಲಿ ಆಗುವಂತ ಕಾಸ್ಟಿಂಗ್‌ ಕೌಚ್‌ ಬಗ್ಗೆಯೂ ಕೂಡ ಬಹಿರಂಗವಾಗಿ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ” ಕೆಲವೊಂದು ವಿಚಾರದಲ್ಲಿ ಮಹಿಳೆಯರಷ್ಟೇ ಅಲ್ಲ ಪುರುಷರು ಮೇಲೂ ಕೂಡ ಕಾಸ್ಟಿಂಗ್‌ ಕೌಚ್‌ ನಡೆಯತ್ತೆ ಅಂತ ನನಗೆ ಮುಂಬೈಗೆ ಬಂದ ಮೇಲೆ ಗೊತ್ತಾಯ್ತು, ಇಂಡಸ್ಟ್ರಿಗೆ ನಾನು ಆಗ ತಾನೇ ಬಂದಿದ್ದೆ, 4 ಬಂಗಲೆಯಲ್ಲಿ ವಾಸಿಸುವಂತ ಮಹಿಳೆ ಆಡಿಷನ್‌ ಇದೆ ಬನ್ನಿ ಅಂತ ಹೇಳಿದ್ಲು ಅದು ಕೂಡ ರಾತ್ರಿ 11 ಗಂಟೆಗೆ, ರಾತ್ರಿ 11 ಗಂಟೆಗೆಲ್ಲಾ ಏನ್‌ ಆಡಿಷನ್‌ ಇರತ್ತೆ, ಇದು ಏನೋ ಬೇರೆ ರೀತಿಯಲ್ಲಿ ನನ್ನನ್ನ ಬಳಸಿಕೊಳ್ಳುವ ಪ್ಲಾನ್‌ ಅನ್ನೋದನ್ನ ತಿಳಿದುಕೊಳ್ಳದೇ ಇರುವಷ್ಟು ಇನೋಸೆಂಟ್‌ ನಾನ್‌ ಅಲ್ಲ. ಸೋ ನನಗೆ ಸ್ವಲ್ಪ ಕೆಲಸ ಇದೆ ಬರೋಕೆ ಆಗೋದಿಲ್ಲ ಅಂತ ಹೇಳ್ದೆ, ಆಗ ಅವಳು ನಿನಗೆ ಇಂಡಸ್ಟ್ರಿಯಲ್ಲಿ ಕೆಲಸ ಮಾಡೋಕೆ ಇಷ್ಟ ಇಲ್ಲವಾ, ಈ ರೀತಿ ಮಾಡಿದ್ರೆ ಎಲ್ಲೂ ಕೆಲಸ ಸಿಗಲ್ಲ ಅಂತ ಹೇಳಿದ್ಲು, ಆದರೂ ಕೂಡ ನಾನು ಬರೋದಕ್ಕೆ ಆಗೋದಿಲ್ಲ ಅಂತ ಹೇಳಿ ರಿಜೆಕ್ಟ್‌ ಮಾಡಿದ್ದೆ. ಇಂತಹ ಮಾತಾಡಿ ನಿಮ್ಮನ್ನ ಡಿಮೋಟಿವೇಟ್‌ ಮಾಡ್ತಾರೆ ಅಂತಹ ಮಾತುಗಳಿಗೆ ನಾನು ತಲೆಕೆಡಿಸಿಕೊಳ್ಳೊದಿಲ್ಲ” ಅಂತ ಹೇಳಿದ್ದಾರೆ. ಹಾಗೇ ಮುಂದುವರೆದು “ನಿಮಗೆ ಒಳ್ಳೆಯ ಪಾತ್ರ ಕೊಡಿಸ್ತೀನಿ ಅಂತ ಹೇಳಿ ದುಡ್ಡ್‌ ತಗಳೋರು ಇದಾರೆ” ಅಂತ ಹೇಳಿಕೊಂಡಿದ್ದಾರೆ.

ಈ ಹಿಂದೆಯೂ ಇಂತಹದೇ ಒಂದು ಘಟನೆ ನಡೆದಿತ್ತು. “ಆರಾಮ್‌ ನಗರದಲ್ಲಿ ಆಡಿಷನ್‌ಗೆ ಹೋಗಿದ್ದೆ. ಅವರು ನನ್ನನ್ನ ಬಾತ್‌ರೂಮ್‌ಗೆ ಕರಕೊಂಡು ಹೋಗಿ, ಇಲ್ಲಿ ಮಸಾಜ್‌ ಸೆಂಟರ್‌ ಇದೆ ಅಂತ ಹೇಳಿದ್ದರು, ಆಡಿಷನ್‌ಗೆ ಮತ್ತೆ ಮಸಾಜ್‌ ಸೆಂಟರ್‌ಗೆ ಏನ್‌ ಕನೆಕ್ಷನ್‌ ಇದೆ ಅಂತ ನನಗೆ ಡೌಟ್‌ ಬಂತು. ನೀವು ವರ್ಕೌಟ್‌ ಕೂಡ ಮಾಡ್ತೀರಲ್ವಾ, ಆಡಿಷನ್‌ ಮುಗಿದ ಮೇಲೆ ಒಂದ್‌ ಸಲ ಬನ್ನಿ ಅಂಥ ಹೇಳಿದ್ದರು. ಅವರು ಕಾಸ್ಟಿಂಗ್‌ ಡೈರೆಕ್ಟರ್‌ ಆಗಿದ್ರಿಂದ ನಾನು ಎನೂ ಹೇಳದೇ ಅಲ್ಲಿಂದ ಹೊರಟು ಬಂದಬಿಟ್ಟೆ” ಅಂತ ಹೇಳಿದ್ದಾರೆ.
ಶಿವ ಠಾಕರೆ ಈ ರೀತಿ ಹೇಳ್ತಾ ಇರೋದು ಹೊಸದೇನಲ್ಲ, ಸುಮಾರು ಬಾರಿ ಸಿನಿಮಾ ಇಂಡಸ್ಟ್ರಿಯಲ್ಲಿ ನಡೆಯುವ ಕೆಟ್ಟ ವಿಚಾರಗಳ ಬಗ್ಗೆ ಆಗಾಗ ತಮ್ಮ ಫ್ಯಾನ್ಸ್ಗಳ ಹತ್ತಿರ ಶೇರ್‌ ಮಾಡ್ಕೊಳ್ತಾ ಇರ್ತಾರೆ.

ಈ ಹಿಂದೆ ನಟ-ರಾಜಕಾರಣಿ ರವಿ ಕಿಶನ್ ಅವರಿಗೆ ಆದಂತ ಅನುಭವವನ್ನೂ ಸಹ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದರು. “ಇಂಡಸ್ಟ್ರಿಯಲ್ಲಿ ನಡೆಯುವ ಕಾಮನ್ ಇನ್ಸಿಡೆಂಟ್‌ ಇದು. ಆದರೆ ಇಂತಹ ವಿಚಾರಗಳಲ್ಲಿ ಸಿಲುಕದೇ ನಾನು ಅಲ್ಲಿಂದ ಬಚಾವ್‌ ಆದೆ. ನಾವು ಯಾವಾಗ್ಲೂ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು, ಶಾರ್ಟ್‌ಕಟ್‌ ಯ್ಯೂಸ್‌ ಮಾಡಬಾರದು ಅಂತ ನನ್ನ ತಂದೆ ಹೇಳಿದ್ದರು, ಅವಳ ಹೆಸರು ಏನು ಅಂತ ನಾನು ಹೇಳೊದಿಲ್ಲ ಯಾಕಂದ್ರೆ ಇವಾಗ ಅವಳು ದೊಡ್ಡ ಆಕ್ಟರ್‌, ರಾತ್ರಿ ಕಾಫಿ ಕುಡಿಯೋಕೆ ಬಾ ಅಂತ ನನಗೆ ಕರೆದಿದ್ದಳು, ಡೇ ಟೈಮಲ್ಲಿ ಕಾಫಿಗೆ ಕರೀದೆನೆ ರಾತ್ರಿ ಯಾಕ್‌ ಕರಿತಾ ಇದಾರೆ ಅಂತ ನನಗೆ ಅಂದಾಜು ಸಿಕ್ತು, ಬೇರೆ ಏನೋ ಕೆಲಸ ಇದೆ ಅಂತ ಹೇಳಿ ತಪ್ಪಿಸಿಕೊಂಡಿದ್ದೆ” ಅಂತ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

-masthmagaa.com

Contact Us for Advertisement

Leave a Reply