ಇನ್ಮುಂದೆ ವಾಟ್ಸಾಪ್​ನಲ್ಲೇ ಪಡೀರಿ ಲಸಿಕೆ ಸರ್ಟಿಫಿಕೇಟ್!

masthmagaa.com:

ಲಸಿಕೆ ಹಾಕಿಸಿಕೊಂಡೋರು ಇನ್ಮುಂದೆ ವಾಟ್ಸಾಪ್​​ನಲ್ಲೇ ಸರ್ಟಿಫಿಕೇಟ್ ಕೂಡ ಪಡೀಬೋದು. ಈ ಬಗ್ಗೆ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಕಚೇರಿಯಿಂದ ಟ್ವೀಟ್ ಮಾಡಿ ಮಾಹಿತಿ ನೀಡಲಾಗಿದೆ. ಮೊದಲಿಗೆ 9013151515 ನಂಬರ್​ನ್ನು ನಿಮ್ಮ ಮೊಬೈಲ್​​​ನಲ್ಲಿ ಸೇವ್ ಮಾಡ್ಕೋಬೇಕು. ಆಮೇಲೆ ಆ ನಂಬರ್​​​ಗೆ ಕೋವಿಡ್ ಸರ್ಟಿಫಿಕೇಟ್ ಅಂತ ಟೈಪ್ ಮಾಡಿ ಕಳುಹಿಸಬೇಕು. ಆಗ ನಿಮ್ಮ ಮೊಬೈಲ್​​ಗೆ ಒಂದು ಒಟಿಪಿ ಬರುತ್ತೆ. ಅದನ್ನು 30 ಸೆಕೆಂಡ್ ಒಳಗೆ ಎಂಟರ್ ಮಾಡಿದ್ರೆ ವಾಟ್ಸಾಪ್​​​ಗೆ ನೇರವಾಗಿ ಸರ್ಟಿಫಿಕೇಟ್ ಬರುತ್ತೆ.

-masthmagaa.com

Contact Us for Advertisement

Leave a Reply