ಇವತ್ತು ಬುಡಕಟ್ಟು ದಿನ.. ಈ ದಿನದ ವಿಶೇಷ ನಿಮಗೆ ಗೊತ್ತಾ?

masthmagaa.com:

ಇವತ್ತು ವರ್ಲ್ಡ್ ಟ್ರೈಬಲ್ ಡೇ ಅಥವಾ ವಿಶ್ವ ಬುಡಕಟ್ಟು ದಿನ. ಇದನ್ನ ಇಂಟರ್​ನ್ಯಾಷನಲ್​ ಡೇ ಆಫ್​ ದಿ ವರ್ಲ್ಡ್ಸ್​ ಇಂಡಿಜೀನಿಯಸ್​ ಪೀಪಲ್​ ಅಂತಾನೂ ಕರೆಯಲಾಗುತ್ತೆ. ಅಂದ್ಹಾಗೆ ಬುಡಕಟ್ಟು ಜನಾಂಗದ ಬಗ್ಗೆ ಮತ್ತು ಅವರ ಹಕ್ಕುಗಳ ರಕ್ಷಣೆ ಬಗ್ಗೆ ಅರಿವು ಮೂಡಿಸಲು ಇದನ್ನ ಆಚರಿಸಲಾಗುತ್ತೆ. ಪ್ರತಿವರ್ಷ ಆಗಸ್ಟ್ 9ನೇ ತಾರೀಖನ್ನ ಟ್ರೈಬಲ್ ಡೇ ಅಂತ ಆಚರಿಸಬೇಕು ವಿಶ್ವಸಂಸ್ಥೆಯ ಸಾಮಾನ್ಯ ಸಭೆ 1994ರಲ್ಲಿ ರೆಸಲೂಷನ್ ಅನ್ನ ಪಾಸ್​ ಮಾಡ್ತು. ಜೊತೆಗೆ 1995ರಿಂದ 2004ರ ದಶಕವನ್ನ ಬುಡಕಟ್ಟು ಜನಾಂಗದ ಮೊದಲ ಅಂತಾರಾಷ್ಟ್ರೀಯ ದಶಕ ಅಂತ ಆಚರಿಸಲಾಯ್ತು. 2005ರಿಂದ 2015ರವರೆಗೆ ಬುಡಕಟ್ಟು ಜನಾಂಗದ ಎರಡನೇ ಅಂತಾರಾಷ್ಟ್ರೀಯ ದಶಕ ಅಂತ ಆಚರಿಸಲಾಯ್ತು. ಎಲ್ಲಾ ಓಕೆ, ಆಗಸ್ಟ್ 9ನೇ ತಾರೀಖು ಯಾಕೆ ಅನ್ನೋ ಪ್ರಶ್ನೆ ನಿಮ್ಗೆ ಮೂಡಬಹುದು. ಅಂದ್ಹಾಗೆ ಪ್ರಮೋಷನ್ ಅಂಡ್​ ಪ್ರೊಟೆಕ್ಷನ್ ಆಫ್​ ಹ್ಯೂಮನ್ ರೈಟ್ಸ್​ ಸಬ್​​ ಕಮಿಷನ್​ನ ವಿಶ್ವಸಂಸ್ಥೆಯ ವರ್ಕಿಂಗ್ ಗ್ರೂಪ್​ ಆನ್​ ಇಂಡಿಜಿನಸ್​ ಪಾಪುಲೇಷನ್​ ಮೊದಲ ಸಲ ಸಭೆ ನಡೆಸಿದ್ದು ಆಗಸ್ಟ್ 9ನೇ ತಾರೀಖು, 1982. ಹೀಗಾಗಿ ಮೊದಲ ಮೀಟಿಂಗ್​ನ ದಿನವನ್ನೇ ಟ್ರೈಬಲ್​ ಡೇ ಅಂತ ಘೋಷಿಸಲಾಗಿದೆ. ಭಾರತದಲ್ಲೂ ಇವತ್ತು ಬುಡಕಟ್ಟು ದಿನವನ್ನ ಆಚರಿಸಲಾಗಿದೆ. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಇದಕ್ಕೆ ಸಂಬಂಧಿಸಿದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ, ಡಾನ್ಸ್ ಮಾಡಿ, ಡ್ರಮ್​ ಬಾರಿಸಿದ್ದಾರೆ.

-masthmagaa.com

Contact Us for Advertisement

Leave a Reply