ಟೋಕಿಯೋದಲ್ಲಿ ಮತ್ತಿಬ್ಬರು ಆಟಗಾರರಿಗೆ ಕೊರೋನಾ!

masthmagaa.com:

ಟೋಕಿಯೋ ಒಲಿಂಪಿಕ್ಸ್​​​ಗೆ ಇನ್ನು ಕೆಲವೇ ಕಲವು ದಿನ ಇದೆ. ಅದ್ರ ನಡುವೆ ಕ್ರೀಡಾಗ್ರಾಮದಲ್ಲಿ ಮತ್ತಿಬ್ಬರು ಕ್ರೀಡಾಪಟುಗಳಿಗೆ ಕೊರೋನಾ ಸೋಂಕು ದೃಢವಾಗಿದೆ. ನಿನ್ನೆಯಷ್ಟೇ ಒಬ್ಬರಲ್ಲಿ ಕೊರೋನಾ ಪತ್ತೆಯಾಗಿದ್ದು, ಅವರನ್ನು ಕ್ರೀಡಾಗ್ರಾಮದಿಂದ ಹೊರಕ್ಕೆ ಕರೆತಂದು, ಹೋಟೆಲ್​​ನಲ್ಲಿ ಕ್ವಾರಂಟೈನ್​​ಗೆ ಒಳಪಡಿಸಲಾಗಿದೆ ಅಂತ ಒಲಿಂಪಿಕ್ಸ್ ಆಯೋಜಕರು ಮಾಹಿತಿ ನೀಡಿದ್ರು. ಅದ್ರ ಬೆನ್ನಲ್ಲೇ ಈಗ ಮತ್ತಿಬ್ಬರು ಆಟಗಾರರಲ್ಲಿ ಕೊರೋನಾ ಬಂದಿದೆ. ಈಗ ಮೂವರನ್ನು ಹೋಟೆಲ್​​ನಲ್ಲಿ ಕ್ವಾರಂಟೈನ್​​ಗೆ ಒಳಪಡಿಸಲಾಗಿದೆ. ಪಾಸಿಟಿವ್ ಬಂದ ಆಟಗಾರರ ಇಡೀ ತಂಡವನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಅಂತ ಟೋಕಿಯೋ ಒಲಿಂಪಿಕ್ಸ್​​​​ನ ವಕ್ತಾರ ಮಾಸ ಟಕಾಯ ಹೇಳಿದ್ದಾರೆ. ಆದ್ರೆ ಯಾವ ತಂಡಕ್ಕೆ ಕೊರೋನಾ ಬಂದಿದೆ ಅಂತ ಮಾತ್ರ ಬಹಿರಂಗಪಡಿಸಿಲ್ಲ.

-masthmagaa.com

Contact Us for Advertisement

Leave a Reply