ದಿನಾಂಕ: ಡಿಸೆಂಬರ್‌ 26, ಸಕ್ರಿಯ ಕೋವಿಡ್‌ ಕೇಸ್‌ಗಳು: 436

masthmagaa.com:

ಕೋವಿಡ್‌ ವಿಚಾರಕ್ಕೆ ಬಂದ್ರೆ, ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 412 ಹೊಸ ಕೋವಿಡ್‌ ಕೇಸ್‌ಗಳು ರಿಪೋರ್ಟ್‌ ಆಗಿವೆ. ಈ ಮೂಲಕ ಆ್ಯಕ್ಟಿವ್‌ ಕೇಸ್‌ಗಳ ಸಂಖ್ಯೆ 4,170ಕ್ಕೆ ಏರಿಕೆಯಾಗಿದೆ. ಹೀಗಂತ ಕೇಂದ್ರ ಆರೋಗ್ಯ ಸಚಿವಾಲಯ ಡಿಸೆಂಬರ್‌ 26 ರಂದು ಮಾಹಿತಿ ನೀಡಿದೆ. ಇದ್ರೊಂದಿಗೆ ಭಾರತದಲ್ಲಿ ಇದುವರೆಗೆ ಒಟ್ಟು 69 ಕೋವಿಡ್‌ ಸಬ್‌-ವೇರಿಯಂಟ್‌ JN.1 ಕೇಸ್‌ಗಳು ಏರಿಕೆಯಾಗಿದೆ ಅಂತಾನೂ ಹೇಳಲಾಗಿದೆ. ಇನ್ನು ಕಳೆದ 24 ಗಂಟೆಗಳಲ್ಲಿ ಕರ್ನಾಟಕದಲ್ಲಿ ಮೂವರು ಕೋವಿಡ್‌ನಿಂದ ಮೃತಪಟ್ಟಿರೋದು ವರದಿಯಾಗಿದೆ. ಜೊತೆಗೆ 125 ಫ್ರೆಶ್‌ ಕೋವಿಡ್‌ ಕೇಸ್‌ಗಳು ರಿಪೋರ್ಟ್‌ ಆಗಿವೆ. ಇವುಗಳಲ್ಲಿ 34 JN.1 ಕೇಸ್‌ಗಳು ಸೇರಿವೆ. ಈ ಮೂಲಕ ರಾಜ್ಯದಲ್ಲಿ ಆ್ಯಕ್ಟಿವ್‌ ಇರೋ ಒಟ್ಟು ಕೋವಿಡ್‌ ಕೇಸ್‌ಗಳ ಸಂಖ್ಯೆ 436ಕ್ಕೆ ಏರಿಕೆಯಾಗಿದೆ.

-masthmagaa.com

Contact Us for Advertisement

Leave a Reply