ಮಾರ್ಗ ಮಧ್ಯದಲ್ಲೇ ಕೆಲಸ ಆರಂಭಿಸಿದ ಆದಿತ್ಯ L-1! ಇಸ್ರೋ ಹೇಳಿದ್ದೇನು?

masthmagaa.com:

ಸೂರ್ಯನ ಬಾಹ್ಯ ವಾತಾವರಣ ಅಧ್ಯಯನಕ್ಕೆ ಕಳಿಸಿರೊ ಆದಿತ್ಯ ಎಲ್‌-1ಗೆ ಸಂಬಂಧಿಸಿದಂತೆ ಇಸ್ರೋ ಗಣೇಶ ಚತುರ್ಥಿಯಂದೇ ಗುಡ್‌ನ್ಯೂಸ್‌ ಕೊಟ್ಟಿದೆ. ಸೂರ್ಯ ಶಿಕಾರಿಗೆ ಹೊರಟಿರುವ ಆದಿತ್ಯ ಎಲ್‌-1 ನೌಕೆ ಈಗಾಗಲೇ ವೈಜ್ಞಾನಿಕ ಅಂಶಗಳನ್ನ ಸಂಗ್ರಹಿಸೋಕೆ ಶುರು ಮಾಡಿದೆ ಅಂತ ಇಸ್ರೋ ಮಾಹಿತಿಯನ್ನ ಹಂಚಿಕೊಂಡಿದೆ. ಭೂಮಿಯಿಂದ 50 ಸಾವಿರ ಕಿಲೋ ಮೀಟರ್‌ ಅಂತರದಲ್ಲಿರೊ ಸೂಪ್ರಾ ಥರ್ಮಲ್‌ ಅಂದ್ರೆ ಹೆಚ್ಚಿನ ಉಷ್ಣಾಂಶದ ಆಕ್ಟಿವಿಟಿಗಳು ಹಾಗೂ ಹೈ ಎನರ್ಜಿ ಹೊಂದಿರೊ ಐಯಾನ್‌ಗಳು ಮತ್ತು ಎಲೆಕ್ಟ್ರಾನ್‌ಗಳನ್ನ ನೌಕೆಯಲ್ಲಿರೊ STEPS ಉಪಕರಣಗಳ ಸೆನ್ಸರ್‌ಗಳು ಮೆಜರ್‌ ಮಾಡೋಕೆ ಶುರು ಮಾಡಿವೆ. ಈ ಡೇಟಾಗಳು ಭೂಮಿಯ ಸುತ್ತಮುತ್ತ ಇರುವ ಕಣಗಳ ನಡವಳಿಕೆಗಳನ್ನ ವಿಶ್ಲೇಷಿಸೋಕೆ ಸಹಾಯ ಆಗುತ್ತೆ ಅಂತ ಇಸ್ರೋ Xನಲ್ಲಿ ಮಾಹಿತಿ ಶೇರ್‌ ಮಾಡಿದೆ.

 

-masthmagaa.com

Contact Us for Advertisement

Leave a Reply