masthmagaa.com:

ರಾಜ್ಯಸಭೆಯಲ್ಲಿ ಗುಲಾಂ ನಬಿ ಆಜಾದ್​ಗೆ ಪ್ರಧಾನಿ ಮೋದಿ ಕಣ್ಣೀರ ವಿದಾಯ ಕೊಟ್ಟ ಬಳಿಕ ಗುಲಾಂ ನಬಿ ಆಜಾದ್​ ವಿದಾಯದ ಭಾಷಣ ಮಾಡುವಾಗ ಪಾಕಿಸ್ತಾನ ವಿಚಾರ ಮತ್ತು ಕಾಶ್ಮೀರ ವಿಚಾರವನ್ನ ಪ್ರಸ್ತಾಪಿಸಿದ್ರು. ಏನಂದ್ರು ಅಂದ್ರೆ, ‘ನಾನು ಸ್ವಾತಂತ್ರ್ಯ ಸಿಕ್ಕ ಬಳಿಕ ಹುಟ್ಟಿದ್ದೇನೆ. ಆದ್ರೆ ಪಾಕಿಸ್ತಾನಕ್ಕೆ ಹೋಗದ ಅದೃಷ್ಟವಂತರಲ್ಲಿ ನಾನು ಕೂಡ ಒಬ್ಬ. ಪಾಕಿಸ್ತಾನದಲ್ಲಿ ಯಾವ ರೀತಿಯ ಪರಿಸ್ಥಿತಿ ಅನ್ನೋ ಬಗ್ಗೆ ನಾನು ಓದಿದಾಗ ನಾನೊಬ್ಬ ಹಿಂದೂಸ್ತಾನಿ ಮುಸ್ಲಿಂ ಅನ್ನೋದಕ್ಕೆ ನನಗೆ ಹೆಮ್ಮೆ ಅನಿಸುತ್ತೆ. ಜೊತೆಗೆ ಯಾವುದೇ ದೇಶದ ಮುಸಲ್ಮಾನನಿಗೆ ಹಿಂದೂಸ್ತಾನಿ ಮುಸಲ್ಮಾನನ ರೀತಿ ಗೌರವ ಸಿಗಬೇಕು. ಅಫ್ಘನಿಸ್ತಾನ, ಇರಾಕ್​ ಮುಂತಾದ ಕೆಲ ಮುಸ್ಲಿಂ ದೇಶಗಳಲ್ಲಿ ಹಿಂದೂಗಳಿಲ್ಲ, ಕ್ರಶ್ಚಿಯನ್ನರಿಲ್ಲ ಅಥವಾ ಬೇರೆ ಧರ್ಮದವರಿಲ್ಲ. ಆದ್ರೆ ಅವರವರೇ ಹೊಡೆದಾಡಿಕೊಂಡು ದೇಶವೇ ನಾಶವಾಗುತ್ತಿರೋದನ್ನ ನೋಡಿದ್ದೀವಿ. ಕೆಲವೊಂದು ದೇಶದಲ್ಲಿ ಕೆಟ್ಟ ಸಂಸ್ಕೃತಿ ಇದೆ. ಅಂತಹ ಸಂಸ್ಕೃತಿ ನಮ್ಮ ದೇಶದಲ್ಲಿ ಬಾರದೇ ಇರಲಿ ಅಂತ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.

ಇನ್ನು ಕಾಶ್ಮೀರ ವಿಚಾರ ಪ್ರಸ್ತಾಪಿಸಿದ ಗುಲಾಂ ನಬಿ ಆಜಾದ್, ‘ನಾನು ಕಾಶ್ಮೀರದ ಎಸ್​ಪಿ ಕಾಲೇಜಿನಲ್ಲಿ ಓದುತ್ತಿದ್ದಾಗ ಆಗಸ್ಟ್ 14 ಮತ್ತು ಆಗಸ್ಟ್​ 15 ಎರಡೂ ದಿನ ಕೂಡ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗ್ತಿತ್ತು. ಆಗಸ್ಟ್ 14ರಂದು ಯಾರ ಸ್ವಾತಂತ್ರ್ಯ ದಿನಾಚರಣೆ (ಪಾಕಿಸ್ತಾನ) ಆಚರಿಸುತ್ತೀವಿ ಗೊತ್ತಲಾ.. ನಮ್ಮ ಕಾಲೇಜಿನಲ್ಲಿ ಆಗಸ್ಟ್ 14ರಂದು ಸ್ವಾತಂತ್ರ್ಯ ದಿನ ಆಚರಿಸೋರ ಸಂಖ್ಯೆನೇ ಜಾಸ್ತಿ ಇತ್ತು. ಆದ್ರೆ ನಾನು ಮತ್ತು ನನ್ನ ಕೆಲವೇ ಕೆಲವು ಸ್ನೇಹಿತರು ಕಾಲೇಜಿನ ಸಿಬ್ಬಂದಿ, ಪ್ರಿನ್ಸಿಪಾಲ್​ ಜೊತೆ ಸೇರ್ಕೊಂಡು ಆಗಸ್ಟ್ 15ಕ್ಕೆ ಸ್ವಾತಂತ್ರ್ಯ ದಿನಾಚರಣೆ ಸೆಲಬ್ರೇಟ್ ಮಾಡ್ತಿದ್ವಿ. ಆಮೇಲೆ ಒಂದು ವಾರ ಕಾಲೇಜಿಗೆ ಹೋಗ್ತಿರಲಿಲ್ಲ. ಯಾಕಂದ್ರೆ ಅವರೆಲ್ಲಾ ನಮಗೆ ಹೊಡೀತಿದ್ರು’ ಅಂತ ಕಾಶ್ಮೀರದಲ್ಲಿ ಆಗಿನ ಪರಿಸ್ಥಿತಿಯನ್ನ ವಿವರಿಸಿದ್ರು.
-masthmagaa.com
Contact Us for Advertisement

Leave a Reply