ಒನ್‌ ನೇಷನ್‌ ಒನ್ ಎಲೆಕ್ಷನ್‌ ನಡೆಸೋಕೆ ನಾವು ರೆಡಿ ಇದ್ದೀವಿ..! ಚುನಾವಣಾ ಆಯೋಗದಿಂದ ಮಹತ್ವದ ಹೇಳಿಕೆ!

masthmagaa.com:

ಮಹತ್ವದ ಬೆಳವಣಿಗೆಯಲ್ಲಿ ಒಂದು ದೇಶ ಒಂದು ಎಲೆಕ್ಶನ್‌ ಬಗ್ಗೆ ಮಾತಾಡಿರೊ ಭಾರತ ಚುನಾವಣಾ ಆಯೋಗದ ಮುಖ್ಯಸ್ಥ ರಾಜೀವ್‌ ಕುಮಾರ್‌ ʻಒನ್‌ ನೇಷನ್‌ ಒನ್‌ ಎಲೆಕ್ಶನ್‌ನ ನಿಬಂಧನೆಗಳ ಪ್ರಕಾರ ಚುನಾವಣಾ ಆಯೋಗ ಕೆಲಸ ಮಾಡೋಕೆ ರೆಡಿಯಿದೆ ಅಂತ ಹೇಳಿದ್ದಾರೆ. ಸರ್ಕಾರದ ಅವಧಿ ಮುಗಿಯೋಕ್ಕಿಂತ 6 ತಿಂಗಳ ಮುಂಚೆನೇ ಜನರಲ್‌ ಎಲೆಕ್ಶನ್‌ನ್ನಅನೌನ್ಸ್ ಮಾಡಬಹುದು. ಹಾಗೇ ವಿಧಾನಸಭೆ ಚುನಾವಣೆಯನ್ನ ಕೂಡ ಅನೌನ್ಸ್‌ ಮಾಡಬಹುದು. ಇದಕ್ಕೆ ಸಂವಿಧಾನದಲ್ಲಿ ಅವಕಾಶವಿದೆ ಅಂತ ಹೇಳಿದ್ದಾರೆ. ಈ ಮೂಲಕ ಒನ್‌ ನೇಷನ್‌ ಒನ್‌ ಎಲೆಕ್ಷನ್‌ ಕುರಿತ ಚರ್ಚೆ ಇನ್ನಷ್ಟು ತೀವ್ರವಾಗಿದೆ. ಯಾಕಂದ್ರೆ ಈ ತಿಂಗಳಲ್ಲಿ ನಡೆಯಲಿರೋ ವಿಶೇಷ ಅಧಿವೇಶನದಲ್ಲೇ ಈ ಒನ್‌ ನೇಷನ್‌ ಒನ್‌ ಎಲೆಕ್ಷನ್ ಮಸೂದೆ ಜಾರಿಗೆ ಬರಬಹುದು ಅಂತ ಹೇಳಲಾಗ್ತಿದೆ. ಇದರ ನಡುವೆಯೇ ಈಗ ಖುದ್ದು ಚುನಾವಣಾ ಆಯೋಗ ಇದರ ಬಗ್ಗೆ ಮಾಹಿತಿ ಕೊಟ್ಟಿದ್ದು ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ. ಈ ವರ್ಷವೇ ಮಿಜೋರಾಂ, ಚತ್ತೀಸ್‌ಗಢ, ಮಧ್ಯ ಪ್ರದೇಶ, ರಾಜಸ್ಥಾನ, ತೆಲಂಗಾಣ ರಾಜ್ಯಗಳಿಗೆ ಚುನಾವಣೆ ನಡೆಯಲಿದ್ದು, ಮುಂದಿನ ವರ್ಷ ಅಂದ್ರೆ ಲೋಕಸಭೆ ಚುನಾವಣೆ ಟೈಮಲ್ಲಿ ಅರುಣಾಚಲ ಪ್ರದೇಶ, ಆಂಧ್ರ ಪ್ರದೇಶ, ಒಡಿಶಾ, ಸಿಕ್ಕಿಂ ರಾಜ್ಯಗಳಿಗೆ ಚುನಾವಣೆ ನಡೆಯಲಿದೆ. ಇನ್ನು ಮುಂದಿನ ವರ್ಷದ ಕೊನೇ ಅವಧಿಯಲ್ಲಿ ಅಂದ್ರೆ ಅಕ್ಟೋಬರ್‌ ನವೆಂಬರ್‌ ಹೊತ್ತಿಗೆ ಹರ್ಯಾಣ, ಮಹಾರಾಷ್ಟ್ರ, ಜಾರ್ಖಾಂಡ್ ರಾಜ್ಯಗಳಿಗೆ ಎಲೆಕ್ಷನ್‌ ನಡೆಯಲಿದೆ. ಹೀಗಾಗಿ ಇವನ್ನೆಲ್ಲಾ ಒಟ್ಟಿಗೆ ಮಾಡೋಕೆ ಅಂದ್ರೆ ಒಂದು ದೇಶ ಒಂದು ಚುನಾವಣೆ ತರೋ ನಿಟ್ಟಿನಲ್ಲಿ ಸಿದ್ದತೆಗಳು ನಡೀತಾ ಇವೆ. ಹೀಗಾಗಿನೇ ಎಲೆಕ್ಷನ್‌ ಕಮಿಷನ್‌ ಇದರ ಬಗ್ಗೆ ಮಾತಾಡಿದೆ ಅಂತ ವಿಶ್ಲೇಷಣೆ ಮಾಡಲಾಗ್ತಿದೆ.

-masthmagaa.com

Contact Us for Advertisement

Leave a Reply