masthmagaa.com:

ಬಾಲಿವುಡ್​ ನಟ ಸುಶಾಂತ್ ಸಿಂಗ್​ ರಜಪೂತ್ ಸಾವಿನ ಪ್ರಕಣರದಲ್ಲಿ ಡ್ರಗ್ಸ್​ ಆಯಾಮದ ಬಗ್ಗೆ ತನಿಖೆ ನಡೆಸುತ್ತಿರುವ ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯುರೊದ (NCB) ಓರ್ವ ಅಧಿಕಾರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಇತ್ತೀಚೆಗೆ ನಟಿ ರಿಯಾ ಚಕ್ರಬರ್ತಿ, ಆಕೆಯ ಸಹೋದರ ಶೌವಿಕ್ ಚಕ್ರಬರ್ತಿ ಸೇರಿದಂತೆ ಹಲವರನ್ನು ಎನ್​ಸಿಬಿ ವಿಚಾರಣೆಗೆ ಒಳಪಡಿಸಿತ್ತು. ಹೀಗಾಗಿ ಇನ್ಯಾರಿಗೆ ಸೋಂಕು ತಗುಲಿದೆಯೋ ಎಂಬ ಅನುಮಾನ ಶುರುವಾಗಿದೆ.

‘ಆ್ಯಂಟಿಜೆನ್ ಪರೀಕ್ಷೆಯಲ್ಲಿ ನಮ್ಮ ವಿಶೇಷ ತನಿಖಾ ತಂಡದ ಓರ್ವ ಸದಸ್ಯರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.  ಹೀಗಾಗಿ ಉಳಿದ ಸದಸ್ಯರನ್ನು ಕೂಡ ಪರೀಕ್ಷೆಗೆ ಒಳಪಡಿಸುತ್ತೇವೆ. ಈ ನಿಟ್ಟಿನಲ್ಲಿ ಇವತ್ತು ವಿಚಾರಣೆಗೆ ಕರೆದಿದ್ದ ಸುಶಾಂತ್ ಅವರ ಮಾಜಿ ಮ್ಯಾನೇಜರ್ ಶ್ರುತಿ ಮೋದಿಯನ್ನು ವಾಪಸ್ ಕಳಿಸಿದ್ದೇವೆ’ ಅಂತ ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯುರೊ ತಿಳಿಸಿದೆ.

-masthmagaa.com

Contact Us for Advertisement

Leave a Reply