ನಿರ್ಬಂಧಗಳನ್ನು ತೆಗೆದ್ರೆ ಸಂಕಷ್ಟ ಮೈಮೇಲೆ ಎಳೆದುಕೊಂಡಂತೆ: ವಿಶ್ವಸಂಸ್ಥೆ

masthmagaa.com:

ಭಾರತದಲ್ಲಿ ದಿನೇ ದಿನೇ ಕೊರೋನಾ ಏರುತ್ತಲೇ ಇದೆ. ಆದ್ರೂ ಕೂಡ ಅನಿವಾರ್ಯವಾಗಿ ಭಾರತ ಒಂದೊಂದೇ ವಲಯದ ಮೇಲಿನ ನಿರ್ಬಂಧಗಳನ್ನು ತೆರವುಗೊಳಿಸುತ್ತಿದೆ. ಈ ನಡುವೆ ಪ್ರತಿಕ್ರಿಯಿಸಿರುವ ವಿಶ್ವ ಆರೋಗ್ಯ ಸಂಸ್ಥೆ, ಯಾವ ದೇಶದಲ್ಲಿ ಕೊರೋನಾ ವೈರಸ್ ಸಕ್ರಿಯ ಪ್ರಕರಣಗಳು ಜಾಸ್ತಿ ಇವೆಯೋ ಅಂತಹ ದೇಶಗಳಲ್ಲಿ ಯಾವುದೇ ಕಾರ್ಯಕ್ರಮಗಳನ್ನು ನಡೆಸಬಾರದು.. ಯಾಕಂದ್ರೆ ಈ ಕಾರ್ಯಕ್ರಮಗಳ ಮೂಲಕವೇ ಸೋಂಕು ಹರಡುವ ಸಾಧ್ಯತೆ ಇರುತ್ತೆ. ಹೀಗಾಗಿ ಕೊರೋನಾ ನಿಯಂತ್ರಣಕ್ಕೆ ತರದೇ ಆರ್ಥಿಕತೆ ಮತ್ತು ಸಮಾಜವನ್ನು ತೆರೆಯೋದು ಸಂಕಷ್ಟವನ್ನು ಮೈಮೇಲೆ ಎಳೆದುಕೊಂಡಂತೆ ಅಂತ ಹೇಳಿದೆ.

ವಿಶ್ವದ ಯಾವುದೇ ದೇಶ ಕೊರೋನಾ ಮಹಾಮಾರಿ ಅಂತ್ಯವಾಗಿದೆ ಅಂತ ಹೇಳಲು ಸಾಧ್ಯವಿಲ್ಲ.. ಸ್ಟೇಡಿಯಂ, ನೈಟ್ ಕ್ಲಬ್, ಧಾರ್ಮಿಕ ಸ್ಥಳಗಳು ಸೇರಿದಂತೆ ಇತರೆ ಜನ ಸೇರುವ ಸ್ಥಳಗಳಲ್ಲಿ ಕೊರೋನಾ ತುಂಬಾ ವೇಗವಾಗಿ ಹರಡುತ್ತೆ. ಹೀಗಾಗಿ ಸರ್ಕಾರಗಳು ಈ ಬಗ್ಗೆ ಸೂಕ್ಷ್ಮವಾಗಿ ಹೆಜ್ಜೆ ಇಡಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೋಸ್ ಅಧನೋಮ್ ಎಚ್ಚರಿಸಿದ್ದಾರೆ.

-masthmagaa.com

Contact Us for Advertisement

Leave a Reply