ಬೆಂಗಳೂರಲ್ಲಿ ವಿಪಕ್ಷಗಳ ಮಹಾಮೈತ್ರಿ ಸಭೆ ಶುರು!

masthmagaa.com:

2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನ ಸೋಲಿಸೋಕೆ ವಿರೋಧ ಪಕ್ಷಗಳು ಕಸರತ್ತು ನಡೆಸುತ್ತಿವೆ. ಈ ಹಿನ್ನಲೆಯಲ್ಲಿ ವಿರೋಧ ಪಕ್ಷದ ನಾಯಕರು ಇಂದು ಹಾಗೂ ನಾಳೆ ಬೆಂಗಳೂರಿನಲ್ಲಿ ಎರಡು ದಿನಗಳ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ 26ಕ್ಕು ಅಧಿಕ ವಿರೋಧ ಪಕ್ಷಗಳು ಭಾಗಿಯಾಗುತ್ತಿದ್ದು, ನಾಯಕರೆಲ್ಲ ಬೆಂಗಳೂರಿನತ್ತ ದೌಡಾಯಿಸಿದ್ದಾರೆ. ಕಾಂಗ್ರೆಸ್‌ ನಾಯಕರಾದ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಹಾಗು DMK ನಾಯಕ ಎಂ.ಕೆ ಸ್ಟಾಲಿನ್‌, TMC ನಾಯಕಿ ಮಮತಾ ಬ್ಯಾನರ್ಜಿ, SP ಅಧ್ಯಕ್ಷ ಅಖಿಲೇಶ್‌ ಯಾದವ್‌, ಮೆಹಬೂಬಾ ಮುಫ್ತಿ ಸೇರಿದಂತೆ ಪ್ರಮುಖ ನಾಯಕರು ಬೆಂಗಳೂರಿಗೆ ಬಂದಿದ್ದಾರೆ. ಇನ್ನು ಇಂದು ರಾತ್ರಿ ರಾಷ್ಟ್ರೀಯ ನಾಯಕರಿಗೆ ಔತಣಕೂಟ ಇದ್ದು, ನಾಳೆ ಬೆಳಗ್ಗೆ ಅಧಿಕೃತ ಸಭೆ ನಡೆಯಲಿದೆ. ಈ ಸಭೆಯಿಂದ ಪ್ರಧಾನಿ ಮೋದಿ ಹಾಗೂ ಆಡಳಿತ ಪಕ್ಷಕ್ಕೆ ಭಯ ಶುರುವಾಗಿದೆ. ನಮ್ಮ ಪಾಟ್ನಾ ಸಭೆ ಬಳಿಕ ಪ್ರಧಾನಿಗಳಿಗೆ NDA ಮೈತ್ರಿಕೂಟದ ನೆನಪಾಗಿದೆ. ಇಷ್ಟು ದಿನ NDA ನೆನಪೇ ಇರಲಿಲ್ಲ ಅಂತ ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್ ವ್ಯಂಗ್ಯ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply