ಕಾಡಲ್ಲಿ ಅಡಗಿರೋ ಉಗ್ರರಲ್ಲಿ ಪಾಕ್ ಕಮಾಂಡೋಗಳು..?

masthmagaa.com:

ಜಮ್ಮು ಕಾಶ್ಮೀರದ ಪೂಂಛ್​ನಲ್ಲಿ ಕಾಡು ಸೇರಿರೋ ಉಗ್ರರು ಇನ್ನೂ ಯೋಧರ ಕೈಗೆ ಸಿಕ್ತಿಲ್ಲ. ಕಳೆದ ಸೋಮವಾರದಿಂದ ಕಾರ್ಯಾಚರಣೆ ನಡೆಯುತ್ತಿದ್ದು, ಈವರೆಗೆ 9 ಮಂದಿ ಯೋಧರು ಹುತಾತ್ಮರಾಗಿದ್ದಾರೆ. ಆದ್ರೆ ಈವರೆಗೂ ಉಗ್ರರು ಹತರಾಗಿರೋ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಉಗ್ರರ ಮೃತದೇಹಗಳು ಪತ್ತೆಯಾಗಿಲ್ಲ. ಇದು ಹಲವು ವರ್ಷಗಳಲ್ಲಿ ಜಮ್ಮು ಕಾಶ್ಮೀರದಲ್ಲಿ ನಡೆದ ದೀರ್ಘಾವಧಿಯ ಉಗ್ರ ಕಾರ್ಯಾಚರಣೆಯಾಗಿದೆ. ಕಾಡಲ್ಲಿ ಅಡಗಿರುವ ಉಗ್ರರು ಪಾಕಿಸ್ತಾನದ ಕಮಾಂಡೋಗಳಿಂದ ಟ್ರೇನಿಂಗ್ ಪಡೆದು ಬಂದಿರೋ ಸಾಧ್ಯತೆ ಇದೆ. ಕೆಲವರು ಪಾಕ್ ಸೈನಿಕರು ಕೂಡ ಇರಬಹುದು.. ಆದ್ರೆ ಈ ಬಗ್ಗೆ ಅವರನ್ನು ಹೊಡೆದುರುಳಿಸಿದ ಬಳಿಕವಷ್ಟೇ ಪಕ್ಕಾ ಆಗುತ್ತೆ ಅಂತ ಮೂಲಗಳು ತಿಳಿಸಿವೆ. ಇನ್ನೂ ಕೂಡ ಕಾರ್ಯಾಚರಣೆ ಮುಂದುವರಿದಿದೆ.

-masthmagaa.com

Contact Us for Advertisement

Leave a Reply