ಪಾಕ್‌ಗೆ ಅಪ್ಪಳಿಸಿದ್ದ ಬ್ರಹ್ಮೋಸ್‌ ಕ್ಷಿಪಣಿ ಕುರಿತು ಜಂಟಿ ತನಿಖೆಗೆ ಆಗ್ರಹ!

masthmagaa.com:

ಕಳೆದ ವರ್ಷ ಭಾರತದಿಂದ ಬ್ರಹ್ಮೋಸ್‌ ಕ್ಷಿಪಣಿಯ ಪಾಕಿಸ್ತಾನಕ್ಕೆ ಹೋಗಿ ಬಿದ್ದಿದ್ದ ಪ್ರಕರಣದ ಕುರಿತು ಜಂಟಿ ತನಿಖೆ ನಡೆಯಬೇಕು ಅಂತ ಪಾಕ್‌ ಮತ್ತೆ ಆಗ್ರಹಿಸಿದೆ. 2022ರ ಮಾರ್ಚ್‌ 9ರಂದು ರಾಜಸ್ಥಾನದ ಸೂರತ್‌ಗಢದಿಂದ ಆಕಸ್ಮಿಕವಾಗಿ ಉಡಾವಣೆಗೊಂಡಿದ್ದ ಬ್ರಹ್ಮೋಸ್‌ ಕ್ಷಿಪಣಿ ಪಾಕಿಸ್ತಾನದ ಭೂಪ್ರದೇಶದಲ್ಲಿ ಅಪ್ಪಳಿಸಿತ್ತು. ಘಟನೆ ನಡೆದು ಒಂದು ವರ್ಷವಾದ ಹಿನ್ನೆಲೆ ಇದೀಗ ಈ ವಿಚಾರವನ್ನ ಪಾಕ್‌ ಮತ್ತೆ ಎತ್ತಿದೆ. ಈ ಗಂಭೀರ ಘಟನೆಯ ಸತ್ಯವನ್ನ ತಿಳಿಯಲು ಜಂಟಿ ತನಿಖೆಯ ನಮ್ಮ ಬೇಡಿಕೆಯನ್ನ ಭಾರತ ಸರ್ಕಾರ ಒಂದು ವರ್ಷ ಕಳೆದ್ರೂ ಒಪ್ಪಿಲ್ಲ. ಏನ್‌ ತನಿಖೆ ಮಾಡಿದ್ದೀವಿ ಅನ್ನೋದನ್ನ ಕೂಡ ನಮ್ಮೊಂದಿಗೆ ಹಂಚಿಕೊಂಡಿಲ್ಲ ಅಂತ ಪಾಕ್‌ನ ವಿದೇಶಾಂಗ ಕಚೇರಿ ಆರೋಪಿಸಿದೆ.

-masthmagaa.com

Contact Us for Advertisement

Leave a Reply