ಪಾಕ್​​ನಲ್ಲಿ ಯುವತಿಯ ಹತ್ಯೆ ಖಂಡಿಸಿ ಬೀದಿಗಿಳಿದ ಜನ!

masthmagaa.com:

ಪಾಕಿಸ್ತಾನದಲ್ಲಿ ಇತ್ತೀಚೆಗೆ ನಡೆದ ಮಾಜಿ ರಾಜತಾಂತ್ರಿಕ ಅಧಿಕಾರಿಯ ಮಗಳ ಹತ್ಯೆ ಭಾರಿ ಪ್ರತಿಭಟನೆಗೆ ಕಾರಣವಾಗಿದೆ. ಮಹಿಳಾ ಹಕ್ಕು ಹೋರಾಟಗಾರರು ಸೇರಿದಂತೆ ದೇಶದಾದ್ಯಂತ ಹಲವು ಸಂಘಟನೆಗಳು ಮತ್ತು ಜನ ರಸ್ತೆಗೆ ಇಳಿದಿದ್ದಾರೆ. ಇನ್ನು ಸಾವಿರಾರು ಮಹಿಳೆಯರು ಸೋಷಿಯಲ್ ಮೀಡಿಯಾದಲ್ಲಿ ನ್ಯಾಯಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಅಂದಹಾಗೆ ಜುಲೈ 20ರಂದು ಪಾಕಿಸ್ತಾನದ ಮಾಜಿ ರಾಜತಾಂತ್ರಿಕ ಅಧಿಕಾರಿ ಶೌಕತ್ ಮುಕದ್ದಮ್​​ ಅವರ 27 ವರ್ಷದ ಮಗಳು ನೂರ್ ಮುಕದ್ದಮ್ ಅವರನ್ನು ಹತ್ಯೆ ಮಾಡಲಾಗಿತ್ತು. ಪಾಕ್ ರಾಜಧಾನಿ ಇಸ್ಲಾಮಾಬಾದ್​ನಲ್ಲೇ ಈ ಘಟನೆ ನಡೆದಿದ್ದು, ನಂತರದಲ್ಲಿ ಮೃತಳ ಸ್ನೇಹಿತ ಜಾಹಿರ್ ಜಾಫರ್​​ನನ್ನು ಪೊಲೀಸರು ಅರೆಸ್ಟ್ ಕೂಡ ಮಾಡಿದ್ರು. ಅಂದಹಾಗೆ ಇತ್ತೀಚೆಗಷ್ಟೇ ಪಾಕಿಸ್ತಾನದಲ್ಲಿ ಅಫ್ಘಾನಿಸ್ತಾನ ರಾಯಭಾರಿಯೊಬ್ಬರ ಮಗಳನ್ನು ಅಪಹರಣ ಮಾಡಿ, ಬಿಡುಗಡೆ ಮಾಡಲಾಗಿತ್ತು. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕ್​​ ಬಟ್ಟೆ ಬಿಚ್ಚಿ ಬೆತ್ತಲಾಗಿ ನಿಲ್ಲುವಂತೆ ಮಾಡಿತ್ತು.

-masthmagaa.com

Contact Us for Advertisement

Leave a Reply