ನ್ಯೂಕ್ಲಿಯರ್‌ ಪವರ್‌ ಪ್ಲಾಂಟ್‌ ಪ್ರಾಜೆಕ್ಟ್‌ ಒಪ್ಪಂದಕ್ಕೆ ಸಹಿ ಹಾಕಿದ ಚೀನಾ-ಪಾಕಿಸ್ತಾನ!

masthmagaa.com:

ಜಾಗತಿಕವಾಗಿ ತನ್ನ ಪ್ರಭಾವವನ್ನ ಹೆಚ್ಚಿಸಿಕೊಳ್ಳೋಕೆ ಚೀನಾ ಪ್ರಯತ್ನಿಸುತ್ತಿರುವ ವಿಷಯ ಗೊತ್ತೇಯಿದೆ. ಇದಕ್ಕಾಗಿ ಚೀನಾ ಹಣ ಹೂಡಿಕೆ ಹಾಗೂ ಅಭಿವೃದ್ಧಿ ಕೆಲಸ ಅಂತೇಳಿ ಪಾಕಿಸ್ತಾನದಂಥ ಆರ್ಥಿಕ ಹಿಂಜರಿತ ಫೇಸ್‌ ಮಾಡ್ತಿರೋ ದೇಶಗಳನ್ನ ತನ್ನ ಬುಟ್ಟಿಗೆ ಹಾಕಿಕೊಳ್ತಿದೆ. ಇದೀಗ ಪಾಕಿಸ್ತಾನ ಹಾಗೂ ಚೀನಾ 3.5 ಬಿಲಿಯನ್‌ ಡಾಲರ್‌ ಅಂದ್ರೆ ಸುಮಾರು 28.7 ಸಾವಿರ ಕೋಟಿ ರೂಪಾಯಿ ಮೌಲ್ಯದ ನ್ಯೂಕ್ಲಿಯರ್‌ ಪ್ರಾಜೆಕ್ಟ್‌ ಒಪ್ಪಂದಕ್ಕೆ ಸಹಿ ಹಾಕಿವೆ. ಚೀನಾ ಸಹಾಯದಿಂದ ಪಾಕ್‌ನ ಪಂಜಾಬ್‌ ಪ್ರಾಂತ್ಯದ ಚಶ್ಮಾದಲ್ಲಿ ಚಶ್ಮಾ-5 ಪವರ್‌ ಪ್ಲಾಂಟ್‌ ನಿರ್ಮಾಣ ಮಾಡಲಾಗುತ್ತಿದೆ. ಇದಕ್ಕೆ ಪಾಕ್‌ ಪ್ರಧಾನಿ ಶಹಬಾಜ್‌ ಷರೀಫ್‌ ಅವ್ರು ಚಾಲನೆ ನೀಡಿದ್ದಾರೆ. ಈ ವೇಳೆ ಚಶ್ಮಾ-5 ನ್ಯೂಕ್ಲಿಯರ್‌ ಪವರ್‌ ಪ್ಲಾಂಟ್‌ ಪ್ರಾಜೆಕ್ಟ್‌ ಒಂದು ದೊಡ್ಡ ಮೈಲಿಗಲ್ಲಾಗಿದ್ದು, ಇಬ್ಬರು ಫ್ರೆಂಡ್ಸ್‌ ನಡುವಿನ ಸಹಕಾರದ ಹ್ಯೂಜ್‌ ಸಕ್ಸಸ್‌ ಸ್ಟೋರಿ ಅಂತ ಷರೀಫ್‌ ಹೇಳಿದ್ದಾರೆ. ಇನ್ನೊಂದ್‌ ಕಡೆ ಪಾಕ್‌ನ ಬಲೂಚಿಸ್ತಾನ ಮಿಲಿಟರಿ ಬೇಸ್‌ ಮೇಲೆ ಭಯೋತ್ಪಾದಕ ದಾಳಿಯಾಗಿದ್ದು, 12 ಸೈನಿಕರು ಮೃತಪಟ್ಟಿದ್ದಾರೆ ಅಂತ ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply