ಭಾರತ ಬಿಟ್ಟು ಹೋಗಲ್ಲ ಎಂದು ಪಾಕ್‌ ಯುವತಿ!

masthmagaa.com:

ತನ್ನ ಪ್ರೀತಿಗಾಗಿ ಪಾಕಿಸ್ತಾನದಿಂದ ಭಾರತಕ್ಕೆ ಅಕ್ರಮವಾಗಿ ಬಂದಿದ್ದ ಇಕ್ರಾ ಜಿವಾನಿಯನ್ನ ಮರಳಿ ಪಾಕ್‌ಗೆ ಕಳಿಸೋಕೆ ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಆದ್ರೆ ಭಾರತ ಬಿಟ್ಟು ಹೋಗಲ್ಲ ಅಂತ ಯುವತಿ ಪಟ್ಟು ಹಿಡಿದಿದ್ದಾಳೆ. ನಾನು ಭಾರತದ ಮುಲಾಯಂ ಸಿಂಗ್‌ನನ್ನ ಮದುವೆ ಆಗಿದ್ದೇನೆ, ನನ್ನ ಪತಿಯನ್ನ ಬಿಟ್ಟು ಹೋಗಲ್ಲ ಅಂತ ಪೊಲೀಸರ ಮುಂದೆ ಹೇಳಿದ್ದಾಳೆ. ಆದ್ರೆ ಇವರಿಬ್ಬರ ಮದುವೆ ಆಗಿರೊ ಬಗ್ಗೆ ಪೊಲೀಸರಿಗೆ ಅನುಮಾನ ಮೂಡಿದೆ. ಯಾಕಂದ್ರೆ ಇವರು ಮದುವೆಯಾಗಿರೋ ಬಗ್ಗೆ ಯಾವುದೇ ಅಧಿಕೃತ ದಾಖಲೆಗಳಲ್ಲ. ದಾಖಲೇ ಬಿಡಿ, ಫೋಟೋ ಕೂಡ ಇಲ್ಲ. ಅದ್ರಲ್ಲೂ ವಿದೇಶಿ ಮಹಿಳೆಯನ್ನ ಮದುವೆಯಾದಾಗ ಕಾನೂನಾತ್ಮಕ ದಾಖಲೆ ಇರಬೇಕು. ಸೋ ಈ ರೀತಿ ಮದುವೆಯನ್ನ ಒಪ್ಪಲು ಸಾಧ್ಯವಿಲ್ಲ ಅಂತ ಪೊಲೀಸರು ಹೇಳಿದ್ದಾರೆ. ಹಾಗೂ ಇವರ ಬಗ್ಗೆ ಇನ್ನಷ್ಟು ತನಿಖೆ ನಡೆಸ್ತಿರೋದಾಗಿ ಪೊಲೀಸರು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply