ದೆಹಲಿಯಲ್ಲಿ ಸಿಕ್ಕ ಪಾಕ್ ಉಗ್ರನಿಂದ ಸ್ಫೋಟಕ ಮಾಹಿತಿ! ಬೆಚ್ಚಿಬಿದ್ದ ಪೊಲೀಸ್ ಪಡೆ

masthmagaa.com:

ದೆಹಲಿಯಲ್ಲಿ ನಿನ್ನೆಯಷ್ಟೇ ಪಾಕ್ ಮೂಲದ ಉಗ್ರ ಮೊಹಮ್ಮದ್ ಅಶ್ರಫ್​​​ ಎಂಬಾತನನ್ನು ಅರೆಸ್ಟ್ ಮಾಡಲಾಗಿತ್ತು. ಇದೀಗ ವಿಚಾರಣೆ ವೇಳೆ ಉಗ್ರನಿಂದ ಕೆಲವೊಂದು ಆಘಾತಕಾರಿ ವಿಚಾರಗಳು ಬಹಿರಂಗವಾಗಿವೆ. ಈತ ದೆಹಲಿಯ 10 ಸ್ಥಳಗಳ ಮೇಲೆ ನಿಗಾ ಇಟ್ಟಿದ್ದ. ಮತ್ತು ಅದ್ರ ಮಾಹಿತಿಯನ್ನು ನಿರಂತರವಾಗಿ ಪಾಕಿಸ್ತಾನದಲ್ಲಿದ್ದ ತನ್ನ ಉಗ್ರ ಬಾಂಧವರಿಗೆ ಕಳುಹಿಸುತ್ತಿದ್ದ ಅಂತ ಪೊಲೀಸರು ತಿಳಿಸಿದ್ದಾರೆ. ಜೊತೆಗೆ 2011ರ ದಾಳಿಗೂ ಮುನ್ನ ದೆಹಲಿ ಹೈಕೋರ್ಟ್​​ ದೆಹಲಿ ಹೈಕೋರ್ಟ್​​ನ್ನು ಕಂಪ್ಲೀಟಾಗಿ ಸರ್ವೇ ಮಾಡಿದ್ದೆ ಅಂತ ಕೂಡ ತಿಳಿಸಿದ್ದಾರೆ. 2011ರ ಸೆಪ್ಟೆಂಬರ್ 7ರಂದು ದೆಹಲಿ ಹೈಕೋರ್ಟ್​​ನ ಗೇಟ್​ ನಂಬರ್ 5ರಲ್ಲಿ ಸ್ಫೋಟ ಮಾಡಲಾಗಿತ್ತು. ಇದ್ರಲ್ಲಿ 15 ಮಂದಿ ಪ್ರಾಣ ಕಳ್ಕೊಂಡು, 79 ಮಂದಿ ಗಾಯಗೊಂಡಿದ್ರು. ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್​ಐ, ತಮ್ಮ ಟಾರ್ಗೆಟ್​​​​​ ಪ್ಲೇಸ್​​ಗಳ ಫೋಟೋ ಕಳುಹಿಸ್ತಿದ್ರು. ಮೊಹ್ಮದ್ ಅಶ್ರಫ್ ಈ ಜಾಗಗಳ ಮೇಲೆ ನಿಗಾ ಇಡ್ತಿದ್ದ ಅಂತ ಗೊತ್ತಾಗಿದೆ. ಇಷ್ಟೇ ಅಲ್ಲ.. ಜಮ್ಮು ಕಾಶ್ಮೀರದಲ್ಲಿ ಯೋಧರು ಮತ್ತು ಅವರ ವಾಹನಗಳ ಮೂವ್​ಮೆಂಟ್​ನ್ನು ಕೂಡ ಫುಲ್ ಟ್ರ್ಯಾಕ್ ಮಾಡ್ತಿದ್ದೆ. ಖಾಕಿ ರಡಾರ್​ನಿಂದ ಹೊರಗುಳಿಯಲು ಪದೇ ಪದೇ ಮೊಬೈಲ್ ನಂಬರ್ ಚೇಂಜ್ ಮಾಡ್ತಿದ್ದೆ ಅಂತ ಹೇಳಿದ್ದಾನೆ. ಇಷ್ಟೆಲ್ಲಾ ಮಾಡ್ಕೊಂಡೇ ಈ ಉಗ್ರ ಪಾಕಿಸ್ತಾನದ ತನ್ನ ಕುಟುಂಬದ ಜೊತೆಗೂ ಸಂಪರ್ಕ ಹೊಂದಿದ್ದ ಅಂತ ದೆಹಲಿ ಪೊಲೀಸ್ ಕಮಿಷನರ್ ರಾಕೇಶ್ ಅಸ್ತಾನಾ ಮಾಹಿತಿ ನೀಡಿದ್ದಾರೆ.

-masthmagaa.com

Contact Us for Advertisement

Leave a Reply