ಪಾಕಿಸ್ತಾನದಲ್ಲಿ ಮತ್ತೆ ಟಿಕ್​ಟಾಕ್ ಬ್ಯಾನ್! ಯಾಕೆ ಗೊತ್ತಾ?

masthmagaa.com:

ಕೆಲವೊಂದು ಅನುಚಿತ ಕಂಟೆಂಟ್​​ಗಳನ್ನು ತೆಗೆಯುವಲ್ಲಿ ವಿಫಲವಾದ ಟಿಕ್​ಟಾಕ್​​ನ್ನು ಪಾಕಿಸ್ತಾನದಲ್ಲಿ ಮತ್ತೆ ಬ್ಯಾನ್ ಮಾಡಲಾಗಿದೆ. ಈ ಮೂಲಕ ಟಿಕ್​ಟಾಕನ್ನು ಸ್ವಲ್ಪ ಸಮಯದಲ್ಲಿ ನಾಲ್ಕು ಬಾರಿ ಬ್ಯಾನ್ ಮಾಡಿದಂತಾಗಿದೆ. ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿರುವ ಪಾಕಿಸ್ತಾನ ಟೆಲಿಕಮ್ಯೂನಿಕೇಷನ್ ಪ್ರಾಧಿಕಾರ, ಟಿಕ್​​ಟಾಕ್​​ನಲ್ಲಿ ನಿರಂತರವಾಗಿ ಅನುಚಿತ ಕಂಟೆಂಟ್​​ಗಳನ್ನು ಶೇರ್ ಮಾಡಲಾಗ್ತಿದೆ. ಇಂಥಾ ಕಂಟೆಂಟ್​​ಗಳನ್ನು ತೆಗೆದುಹಾಕಲು ಎಷ್ಟೇ ಹೇಳಿದ್ರೂ ಆ ನಿಟ್ಟಿನಲ್ಲಿ ಯಾವುದೇ ಹೆಜ್ಜೆ ಇಡ್ತಿಲ್ಲ. ಹೀಗಾಗಿ ಎಲೆಕ್ಟ್ರಾನಿಕ್ ಅಪರಾಧಗಳ ತಡೆ ಕಾಯ್ದೆ 2016ರ ಅಡಿಯಲ್ಲಿ ಟಿಕ್​ಟಾಕ್​ ಆ್ಯಪ್ ಮತ್ತು ವೆಬ್​ಸೈಟ್ ಬ್ಯಾನ್ ಮಾಡಿರೋದಾಗಿ ಹೇಳಿದ್ದಾರೆ. ಈ ಹಿಂದೆ ಸಿಂಧ್ ಹೈಕೋರ್ಟ್​​​ ಅನೈತಿಕ ಸಂದೇಶಗಳನ್ನು ಸಾರಲಾಗ್ತಿದೆ ಅನ್ನೋ ಆರೋಪದ ಮೇಲೆ ಟಿಕ್​ಟಾಕ್​ನ್ನು ಬ್ಯಾನ್ ಮಾಡೋಕೆ ಸೂಚಿಸಿತ್ತು. ಆದ್ರೆ ಜುಲೈ 2ರಂದು ಮತ್ತೆ ತನ್ನ ಆದೇಶವನ್ನು ಹಿಂದಕ್ಕೆ ಪಡೆದಿತ್ತು. ಹಾಗಂತ ಟಿಕ್​ಟಾಕ್ ಕ್ರಮ ಕೈಗೊಂಡಿಲ್ಲ ಅಂತಿಲ್ಲ. ಕಳೆದ ಮೂರು ತಿಂಗಳಲ್ಲಿ ಪಾಕಿಸ್ತಾನದಲ್ಲಿ 60 ಲಕ್ಷದಷ್ಟು ವಿಡಿಯೋಗಳನ್ನು ತೆಗೆದುಹಾಕಿದ್ದೇವೆ ಅಂತ ಸಂಸ್ಥೆ ಮಾಹಿತಿ ನೀಡಿತ್ತು. ಇನ್ನೊಂದು ವಿಷ್ಯ ಅಂದ್ರೆ ಇತ್ತೀಚೆಗಷ್ಟೇ ಪಾಕ್ ಅಧ್ಯಕ್ಯ ಆರಿಫ್ ಅಲ್ವಿ ಕೂಡ ಟಿಕ್ ಟಾಕ್ ಖಾತೆ ಓಪನ್ ಮಾಡಿದ್ರು. ಈ ಬಗ್ಗೆ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಹಾಕಿ, ನಾನು ಟಿಕ್ ಟಾಕ್ ಮೂಲಕ ಯುವ ಪೀಳಿಗೆಯಲ್ಲಿ ಜಾಗೃತಿ ಮೂಡಿಸುವ, ಪ್ರೇರಣೆ ನೀಡುವ ಕೆಲಸ ಮಾಡ್ತೀನಿ ಅಂತ ಹೇಳ್ಕೊಂಡಿದ್ರು. ಅದ್ರ ಬೆನ್ನಲ್ಲೇ ಈಗ ಆ ಆ್ಯಪ್​​ನ್ನೇ ಬ್ಯಾನ್ ಮಾಡಲಾಗಿದೆ.

-masthmagaa.com

Contact Us for Advertisement

Leave a Reply