ಪಾಕ್​ನಲ್ಲಿ ಹಿಂದೂ ಶಿಕ್ಷಕನಿಗೆ ಜೀವಾವಧಿ ಶಿಕ್ಷೆ! ಯಾಕೆ ಗೊತ್ತಾ?

masthmagaa.com:

ಇದೆಲ್ಲದರ ನಡುವೆ ಮತ್ತೊಂದುಕಡೆ ಪ್ರವಾದಿ ಮಹಮ್ಮದ್ ಪೈಗಂಬರ್ ನಿಂದಿಸಿದ ಅಪರಾಧದ ಮೇಲೆ ಪಾಕಿಸ್ತಾನದ ನ್ಯಾಯಾಲಯವೊಂದು ಹಿಂದೂ ಶಿಕ್ಷಕನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಅಲ್ಲದೆ 50 ಸಾವಿರ ದಂಡ ವಿಧಿಸಿದೆ. ಪಾಕಿಸ್ತಾನದ ಸಿಂಧ್‌ ಪ್ರಾಂತ್ಯದಲ್ಲಿ ಸರ್ಕಾರಿ ಕಾಲೇಜಿನ ಶಿಕ್ಷಕನಾಗಿದ್ದ ನೋತನ್‌ ಲಾಲ್‌ ಮೇಲೆ ಅದೇ ಶಾಲೆಯ 11ನೇ ತರಗತಿ ವಿದ್ಯಾರ್ಥಿಯೊಬ್ಬ, ಪ್ರವಾದಿ ಮಹಮ್ಮದ್​ ಪೈಗಂಬರ್​ ನಿಂದಿಸಿದ್ದ ಆರೋಪ ಮಾಡಿದ್ದ. ವಿದ್ಯಾರ್ಥಿಯ ತಂದೆ ದೂರು ದಾಖಲಿಸಿದ್ರು. ಓರ್ವ ಹಿಂದೂ ಪ್ರವಾದಿ ವಿರುದ್ಧ ಅವಹೇಳನಕಾರಿ ಪದಗಳನ್ನ ಬಳಸಿದ್ದಾರೆ ಅನ್ನೋ ಸುದ್ದಿ ಕಾಡ್ಗಿಚ್ಚಿನಂತೆ ಹರಡಿತ್ತು. ಇದರ ಬೆನ್ನಲ್ಲೇ ಘೋಟ್ಕಿ ಜಿಲ್ಲೆಯಲ್ಲಿ ಗಲಭೆ ಸೃಷ್ಟಿಯಾಗಿ, ಹಿಂದೂಗಳ ಅಂಗಡಿಗಳನ್ನ ಲೂಟಿ ಮಾಡಲಾಗಿತ್ತು. ಇದರ ಬೆನ್ನಲ್ಲೇ 2019ರಲ್ಲಿ ಶಿಕ್ಷಕ ನೋತನ್​ ಲಾಲ್​ ಅರೆಸ್ಟ್ ಆಗಿದ್ರು. ಇದೀಗ ಶಿಕ್ಷೆ ಪ್ರಕಟವಾಗಿದೆ. ಆದ್ರೆ ಸೆಷನ್​ ಕೋರ್ಟ್​ನ ತೀರ್ಪಿನ ವಿರುದ್ಧ ಹೈಕೋರ್ಟ್​ ಮೊರೆ ಹೋಗಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. All Pakistan Hindu Panchayat ಕೂಡ ಈ ಪ್ರಕರಣದಲ್ಲಿ ಮತ್ತೆ ತನಿಖೆ ನಡೆಸಬೇಕು ಅಂತ ಪಾಕಿಸ್ತಾನದ ಚೀಫ್​ ಜಸ್ಟಿಸ್​ಗೆ ಆಗ್ರಹಿಸಿದೆ. 1947ರಿಂದ ಇಲ್ಲಿಯವರೆಗೆ ಪಾಕಿಸ್ತಾನದಲ್ಲಿ ಒಟ್ಟು 1,415 ಧರ್ಮ ನಿಂದನೆ ಪ್ರಕರಣಗಳು ದಾಖಲಾಗಿವೆ ಅಂತ ಸೆಂಟರ್‌ ಫಾರ್‌ ರಿಸರ್ಚ್‌ ಅಂಡ್‌ ಸೆಕ್ಯುರಿಟಿ ಸ್ಟಡೀಸ್‌ ಸಂಸ್ಥೆ ಹೇಳಿದೆ. ಜೊತೆಗೆ 18 ಮಹಿಳೆಯರು ಮತ್ತು 71 ಪುರುಷರು ಇದುವರೆಗೂ ಪಾಕಿಸ್ತಾನದಲ್ಲಿ ಎಕ್ಸ್ಟ್ರಾ ಜುಡಿಷಿಯಲ್‌ ಕಿಲ್ಲಿಂಗ್‌ ಅಂದ್ರೆ ನ್ಯಾಯಾಲಯದ ವ್ಯಾಪ್ತಿಗೆ ಒಳಪಡದೆ ಪೋಲಿಸರೇ ಸಾಯಿಸಿರೋ ಪ್ರಕರಣಗಳಿವೆ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply