ಪಾಕ್‌ ಸೇನೆ ವಿರುದ್ದ ತಿರುಗಿ ಬಿದ್ದ ಪಾಕ್‌ ನ್ಯಾಯಾಂಗ!

masthmagaa.com:

ಪಾಕಿಸ್ತಾನದಲ್ಲಿ ಸೇನೆ ವಿರುದ್ದ ಅಲ್ಲಿನ ನ್ಯಾಯಾಂಗವೇ ತಿರುಗಿ ಬಿದ್ದಿದೆ. ಪಾಕಿಸ್ತಾನ ಸೇನೆಯ ಇಂಟಲಿಜೆನ್ಸ್‌ ವಿಭಾಗ, ಐಎಸ್‌ಐ ನ್ಯಾಯಾಂಗದ ವಿಚಾರಗಳಲ್ಲಿ ಅತಿಯಾದ ಹಸ್ತಕ್ಷೇಪ ಮಾಡ್ತಿದೆ ಅಂತ ಇಸ್ಲಾಮಾಬಾದ್‌ ಹೈಕೋರ್ಟ್‌ ಗುಟುರು ಹಾಕಿದೆ. ಈ ಬಗ್ಗೆ ಪಾಕ್‌ನ ಸುಪ್ರೀಂ ಕೋರ್ಟ್‌ಗೆ ದೂರು ನೀಡಲಾಗಿದೆ. ಇಸ್ಲಾಮಬಾದ್‌ ಹೈ ಕೋರ್ಟ್‌ನ 7 ಮಂದಿ ಜಡ್ಜ್‌ಗಳು ಪಾಕ್‌ನ ಚೀಫ್‌ ಜಸ್ಟೀಸ್‌ ಅಮೀರ್‌ ಫಾರೂಕ್‌ ಅವರಿಗೆ ಪತ್ರ ಬರೆದಿದ್ದಾರೆ. ಅದರಲ್ಲಿ ಪಾಕಿಸ್ತಾನದ ಐಎಸ್‌ಐ, ಕೋರ್ಟಿನ ತೀರ್ಪುಗಳಲ್ಲಿ, ನೇಮಕಾತಿ ವಿಚಾರದಲ್ಲಿ ಜಾಸ್ತಿ ತಲೆ ಹಾಕ್ತಿದೆ. ಯಾವುದೇ ಕೆಲಸ ಮಾಡೋಕೂ ಅವರು ಬಿಡ್ತಾ ಇಲ್ಲ. ಮೊನ್ನೆ ಜಸ್ಟೀಸ್‌ ಸಿದ್ದಿಕಿ ಅನ್ನೋ ನ್ಯಾಯಾದೀಶರೊಬ್ರ ಅಧಿಕಾರವಧಿ ಬಾಕಿ ಉಳಿದಿದ್ರೂ ಅಲ್ಲಿಗೆ ಬೇರೆಯವರನ್ನ ತಂದು ಕೂರಿಸಲಾಗಿದೆ. ಅಕ್ರಮವಾಗಿ ನ್ಯಾಯಾದೀಶರ ನೇಮಕಾತಿಯಾಗಿದೆ. ಐಎಸ್‌ಐ ಅಧಿಕಾರಿಗಳನ್ನ ಬಹಿರಂಗವಾಗಿ ಟೀಕಿಸಿದ್ದಕ್ಕೆ ಸಿದ್ದಿಕಿ ಅವರನ್ನ ಕೆಳಗಿಳಿಸಲಾಗಿದೆ. ಇದರ ವಿರುದ್ದ ದಯವಿಟ್ಟು ಕ್ರಮ ತಗೋಬೇಕು ಅಂತ ಒಂದು ಲೆಟರ್‌ ಬರೆದು ಅದರಲ್ಲಿ ಉಲ್ಲೇಖ ಮಾಡಲಾಗಿದೆ.

-masthmagaa.com

Contact Us for Advertisement

Leave a Reply