ಉಗ್ರರಿಗೆ ಬೆಂಬಲಿಸೋದನ್ನ ನಿಲ್ಲಿಸಿ.. ಪಾಕ್ ಗೆ ಅಮೆರಿಕಾ ಎಚ್ಚರಿಕೆ..!

ಪಾಕಿಸ್ತಾನ ತಾಲಿಬಾನ್ ಮತ್ತು ಇತರೆ ಉಗ್ರ ಸಂಘಟನೆಗಳಿಗೆ ಬೆಂಬಲ ನೀಡೋದು ಬಂದ್ ಮಾಡಬೇಕು ಎಂದು ಯುಎಸ್ ಸೆನೆಟರ್ ಮ್ಯಾಗಿ ಹಸನ್ ಹೇಳಿದ್ದಾರೆ. ಭಯೋತ್ಪಾದನೆ ವಿಚಾರವಾಗಿ ಅಮೆರಿಕದ ಸೆನೆಟರ್ ಪಾಕಿಸ್ತಾನದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಅಫ್ಘಾನಿಸ್ಥಾನದಲ್ಲಿ ಸ್ಥಿರತೆ ಕಾಪಾಡಲು ಪಾಕಿಸ್ತಾನ ಪ್ರಮುಖ ಪಾತ್ರ ವಹಿಸಬೇಕಾಗಿದೆ. ಭಯೋತ್ಪಾದನೆಗೆ ಕಡಿವಾಣ ಮತ್ತು ಅರ್ಥವ್ಯವಸ್ಥೆಯನ್ನು ಧೃಡಪಡಿಸುವ ಸಲುವಾಗಿ ಕೆಲಸ ಮಾಡಬೇಕು ಅಂದ್ರು.

ಇದಕ್ಕೂ ಮುನ್ನ ಅಮೆರಿಕಾ ಸೆನೆಟರ್ ಮ್ಯಾಗಿ ಹಸನ್ ಮತ್ತು ಕ್ರಿಸ್ ವೇನ್ ಹಾಲೆನ್ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಸೇನಾ ಮುಖ್ಯಸ್ಥ ಕಮರ್ ಜಾವೇದ್ ಬಾಜ್ವಾ, ಪಾಕ್ ಆಕ್ರಮಿತ ಕಾಶ್ಮೀರದ ಅಧಿಕಾರಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಬಳಿಕ ಮಾತನಾಡಿದ ಅವರು, ಭಯೋತ್ಪಾದನೆ ಮತ್ತು ಇಂತಹ ಚಿಂತನೆಗಳನ್ನು ತಡೆಯಲು ಏನು ಮಾಡಬಹುದು ಎಂಬ ಬಗ್ಗೆ ಪಾಕಿಸ್ತಾನದ ನಾಯಕರ ಜೊತೆ ಸಭೆ ನಡೆಸಿದ್ದೇವೆ. ಅಫ್ಘಾನಿಸ್ತಾನದ ತಾನಿಬಾನ್ ಮತ್ತು ಇತರೆ ಸಂಘಟನೆಗಳ ನಿರ್ಮೂಲನೆಗೆ ಪಾಕ್ ನೇತೃತ್ವದಲ್ಲಿ ನೇರ ಮಾತುಕತೆ ತುಂಬಾ ಅನಿವಾರ್ಯವಾಗಿತ್ತು ಎಂದಿದ್ದಾರೆ.

ಭಾರತಕ್ಕೂ ಭೇಟಿ ನೀಡಲಿರುವ ಮ್ಯಾಗಿ ಹಸನ್, ಪ್ರಮುಖ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆ.

Contact Us for Advertisement

Leave a Reply