‘ಇಮ್ರಾನ್ ಖಾನ್ ಯಾವಾಗ ಸಾಯೋದು ಯಾವಾಗ?’: ಮಾಜಿ PM ನವಾಜ್ ಷರೀಫ್

masthmagaa.com:

ಪಾಕ್ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಮಾಜಿ ಪ್ರಧಾನಿ ನವಾಜ್ ಷರೀಫ್ ದೊಡ್ಡಮಟ್ಟದಲ್ಲಿ ಅಪಮಾನ ಮಾಡಿ ಮಾತಾಡಿದ್ದಾರೆ. ಇಮ್ರಾನ್ ಖಾನ್ ಸೇನೆ ಮತ್ತು ಐಎಸ್​ಐ ಕೈಗೊಂಬೆಯಾಗಿದ್ದಾರೆ. ಭಾರತದಲ್ಲಿ ಇಮ್ರಾನ್ ಖಾನ್​​ದು ಕೈಗೊಂಬೆ ಸರ್ಕಾರ ಅಂತ ಲೇವಡಿ ಮಾಡಿದ್ರೆ, ಅಮೆರಿಕದಲ್ಲಿ ನಮ್ಮ ಮೇಯರ್​​ಗೆ ಇರೋ ಅಧಿಕಾರವು ಪಾಕ್ ಪ್ರಧಾನಿಗಿಲ್ಲ ಅಂತ ವ್ಯಂಗ್ಯ ಮಾಡ್ತಿದ್ದಾರೆ ಅಂತ ಹೇಳಿದ್ದಾರೆ. ಜೊತೆಗೆ ಇಮ್ರಾನ್ ಖಾನ್ ಸಾಲಕ್ಕಾಗಿ ಅಂತಾರಾಷ್ಟ್ರೀಯ ಹಣಕಾಸು ನಿಧಿ ಮುಂದೆ ಹೋಗೋ ಬದಲು ಆತ್ಮ ಹತ್ಯೆ ಮಾಡ್ಕೊಂಡು ಸಾಯೋದು ಒಳ್ಳೆಯದು. ನಾವು ಕೂಡ ಇಮ್ರಾನ್ ಖಾನ್ ಯಾವಾಗ ಆತ್ಮಹತ್ಯೆ ಮಾಡ್ಕೊಳ್ತಾರೆ ಅಂತ ಕಾಯ್ತಿದ್ದೀವಿ ಅಂತ ಹೇಳಿದ್ದಾರೆ. ಇಮ್ರಾನ್ ಖಾನ್ ಸರ್ಕಾರ ಬಂದ್ಮೇಲೆ ನವ ಪಾಕಿಸ್ತಾನದ ನೆಪದಲ್ಲಿ 34 ಬಿಲಿಯನ್ ಡಾಲರ್ (1 ಬಿಲಿಯನ್ ಅಂದ್ರೆ 100 ಕೋಟಿ ಡಾಲರ್​​​​​​) ವಿದೇಶಿ ಸಾಲ ಮಾಡಿದ್ದಾರೆ. ಇದ್ರಿಂದ ದೇಶದ ಆರ್ಥಿಕತೆಯೇ ಹದಗೆಟ್ಟು ಹೋಗಿದೆ ಅಂತ ಉಗಿದಿದ್ದಾರೆ. ಅಂದಹಾಗೆ ಈ ಹಂದೆ ನವಾಜ್ ಷರೀಫ್ ಸರ್ಕಾರ ಇದ್ದಾಗ ಇದೇ ಇಮ್ರಾನ್ ಖಾನ್ ವಿದೇಶಿ ಸಾಲ ಮಾಡೋ ವಿಚಾರವಾಗಿ ಸರ್ಕಾರವನ್ನು ಟೀಕಿಸ್ತಿದ್ರು.

-masthmagaa.com

Contact Us for Advertisement

Leave a Reply