ಭಾರತ ಜೊತೆ ವ್ಯಾಪಾರ ಸಂಬಂಧ ಇಲ್ಲ: ಯೂಟರ್ನ್ ಹೊಡೆದ ಪಾಕ್!

masthmagaa.com:

ಭಾರತದ ಜೊತೆ ವ್ಯಾಪಾರ ಸಂಬಂಧ ಬೆಳೆಸೊಕೆ ಎದುರು ನೋಡ್ತಿದ್ದೇವೆ ಅಂದಿದ್ದ ಪಾಕಿಸ್ತಾನ ಈಗ ಯೂಟರ್ನ್‌ ಹೊಡೆದಿದೆ. ಭಾರತದೊಂದಿಗೆ ವ್ಯಾಪಾರ ಬೆಳೆಸೊ ಬಗ್ಗೆ ಅಂತಹ ಯಾವುದೇ ಪ್ಲ್ಯಾನ್‌ ನಮ್ಮ ಮುಂದೆ ಇಲ್ಲ ಅಂತ ಪಾಕ್‌ ವಿದೇಶಾಂಗ ಇಲಾಖೆ ಹೇಳಿಕೆ ರಿಲೀಸ್‌ ಮಾಡಿದೆ. ಅಂದ್ಹಾಗೆ ಮಾರ್ಚ್‌ 23ರಂದು ಇದೇ ಪಾಕ್‌ ವಿದೇಶಾಂಗ ಸಚಿವ ದಾರ್‌, ಭಾರತದೊಂದಿಗೆ ವ್ಯಾಪಾರ ಸಂಬಂಧವನ್ನ ಮರುಸ್ಥಾಪಿಸಲು ಪಾಕ್‌ನ ಉದ್ಯಮಿಗಳು ಉತ್ಸುಕರಾಗಿದ್ದಾರೆ ಅಂತೇಳಿದ್ರು. ಈ ವಿಚಾರವನ್ನ ಪಾಕ್ ಗಂಭೀರವಾಗಿ ಪರಿಣಿಸುತ್ತೆ ಅಂತಲೂ ಮಾತಾಡಿದ್ರು. ಆದರೆ ಈಗ ಬಿಗ್‌ ಯೂಟರ್ನ್‌ ಹೊಡೆದಿದೆ. ಈ ಬಗ್ಗೆ ಮಾತನಾಡಿರೋ ಪಾಕ್‌ ವಿದೇಶಾಂಗ ಕಛೇರಿ ವಕ್ತಾರೆ ಮುಮ್ತಾಜ್‌ ಜಾಹ್ರ ಬಲೋಚ್‌, ʻ2019ರಿಂದ ಭಾರತ-ಪಾಕಿಸ್ತಾನ್‌ ಮಧ್ಯ ಯಾವುದೇ ವ್ಯಾಪಾರ ಸಂಬಂಧ ಇಲ್ಲ. ಸದ್ಯ ಈ ನಿಲುವಲ್ಲಿ ಯಾವುದೇ ಬದಲಾವಣೆ ಇಲ್ಲʼ ಅಂತೇಳಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಅಫಿಶಿಯಲ್ ಸ್ಟೇಟ್‌ಮೆಂಟನ್ನೂ ರಿಲೀಸ್‌ ಮಾಡಿದ್ದಾರೆ. ಈ ಟರ್ನ್‌ಗೆ ಕಾರಣ ಏನು ಅನ್ನೋ ಬಗ್ಗೆ ಇನ್ನೂ ಕ್ಲಾರಿಟಿ ಇಲ್ಲ.

-masthmagaa.com

Contact Us for Advertisement

Leave a Reply