ಕೊಹ್ಲಿ ಪಾಕಿಸ್ತಾನಕ್ಕೆ ಬಂದು ಆಡಬೇಕು: ಪಾಕ್ ಅಭಿಮಾನಿ

ವಿರಾಟ್ ಕೊಹ್ಲಿಗೆ ಭಾರತ ಮಾತ್ರವಲ್ಲ. ಪಕ್ಕದ ಶತ್ರುದೇಶ ಪಾಕಿಸ್ತಾನದಲ್ಲೂ ಕೂಡ ಫ್ಯಾನ್ಸ್ ಇದ್ದಾರೆ. ಪಾಕಿಸ್ತಾನ ಮೂಲದ ವಿರಾಟ್ ಕೊಹ್ಲಿ ಅಭಿಮಾನಿಯೊಬ್ಬ, ಕೊಹ್ಲಿ ಪಾಕಿಸ್ತಾನದಲ್ಲಿ ಬಂದು ಕ್ರಿಕೆಟ್ ಆಡಬೇಕು ಎಂದು ಬ್ಯಾನರ್ ಹಿಡಿದು ಬೇಡಿಕೊಂಡಿದ್ದಾರೆ. ಈ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸುಮಾರು 10 ವರ್ಷಗಳ ಬಳಿಕ ಪಾಕಿಸ್ತಾದನಲ್ಲಿ ಕ್ರಿಕೆಟ್ ಸರಣಿ ನಡೆಯುತ್ತಿದೆ. ಇಲ್ಲಿನ ಗಡಾಫಿ ಮೈದಾನದಲ್ಲಿ ನಡೆದ ಶ್ರೀಲಂಕಾ-ಪಾಕ್ ಟಿ-20 ಪಂದ್ಯ ನೋಡಲು ಬಂದಿದ್ದ ಕ್ರಿಕೆಟ್ ಫ್ಯಾನ್ ಒಬ್ಬ, ಕೊಹ್ಲಿ ಪಾಕಿಸ್ತಾನಕ್ಕೆ ಬಂದು ಕ್ರಿಕೆಟ್ ಆಡಬೇಕೆಂದು ಬ್ಯಾನರ್ ಹಿಡಿದು ಮನವಿ ಮಾಡಿದ್ದಾನೆ. ಇದನ್ನು ಟ್ವಿಟ್ಟರ್‍ನಲ್ಲಿ ಹಾಕಲಾಗಿದ್ದು, ನೀವು ಪಾಕಿಸ್ತಾನಕ್ಕೆ ಬರುತ್ತೀರಿ ಮತ್ತು ಕ್ರಿಕೆಟ್ ಆಡುತ್ತೀರಿ ಎಂದು ವಿಶ್ವಾಸವಿದೆ. ನಾವು ನಿಮ್ಮನ್ನು ಪ್ರೀತಿಸುತ್ತೇನೆ. ನಾನು ನಿಮ್ಮ ದೊಡ್ಡ ಅಭಿಮಾನಿ ಎಂದು ಬರೆಯಲಾಗಿದೆ.

Contact Us for Advertisement

Leave a Reply