ಭಾರತದಲ್ಲಿ ಪಾಕಿಸ್ತಾನದ ಮೊಬೈಲ್‌ ಸಿಗ್ನಲ್!‌ ಏನಿದರ ರಹಸ್ಯ?

masthmagaa.com:

ಹಿಮಾಚಲ ಪ್ರದೇಶದಲ್ಲಿ ಟ್ರೆಕ್ಕಿಂಗ್​ ಹೋಗಿದ್ದ ಚಾರಣಿಗರಿಗೆ ವಿಚಿತ್ರ ಅನುಭವ ಆಗಿದೆ. ಅವರ ಮೊಬೈಲ್ ಫೋನ್​ಗಳಲ್ಲಿ ಪಾಕಿಸ್ತಾನದ ಸಿಗ್ನಲ್ ಕ್ಯಾಚ್ ಆಗಿದೆ. ಜೊತೆಗೆ ಅವರ ಫೋನ್​​ಲ್ಲಿ ಟೈಮ್ ಝೋನ್ ಐಎಸ್​ಟಿ/ಇಂಡಿಯನ್ ಸ್ಟಾಂಡರ್ಡ್​ ಟೈಮ್​ನಿಂದ ಪಿಎಸ್​ಟಿಗೆ ಚೇಂಜ್ ಆಗಿದೆ. ಈ ಬಗ್ಗೆ ಕೂಡಲೇ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಲಾಗಿದೆ ಅಂತ ಹಿಮಾಚಲ ಪ್ರದೇಶ ಪೊಲೀಸರು ಹೇಳಿದ್ದಾರೆ. ಇದು ಅತ್ಯಂತ ಗಂಭೀರ ವಿಚಾರ. ಪಾಕ್ ಗಡಿಯಿಂದ ಪ್ರದೇಶಕ್ಕೆ ಮಿನಿಮಮ್ 150 ಕಿಲೋಮೀಟರ್ ದೂರ ಇದೆ. ಅಂತಾರಾಷ್ಟ್ರೀಯ ನಿಯಮಗಳ ಪ್ರಕಾರ ಗಡಿಯಿಂದ 5ಕಿಲೋ ಮೀಟರ್​ಗೂ ಹೆಚ್ಚಿನ ಜಾಗದಲ್ಲಿ ಇನ್ನೊಂದು ದೇಶದ ಸಿಗ್ನಲ್ಸ್ ಸಿಗಬಾರ್ದು. ಹೀಗಾಗಿ ಪಾಕಿಸ್ತಾನ ಈ ಥರ ಅಗತ್ಯ ಬಿದ್ದಾಗ ತನ್ನ ಭಯೋತ್ಪಾದಕರಿಗೆ ಅನುಕೂಲ ಆಗುವಂತೆ ಭಾರತದಲ್ಲೂ ತನ್ನ ಸಿಗ್ನಲ್ ಸಿಗೋ ಥರ ಮಾಡ್ತಿದೆಯಾ ಅನ್ನೋ ಅನುಮಾನ ಮೂಡಿದೆ ಈಗ. ಈ ಹಿಂದೆ 2018ರಲ್ಲೂ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಪಾಕಿಸ್ತಾನದ ಪ್ರಮುಖ ಮೊಬೈಲ್ ನೆಟ್​ವರ್ಕ್​ ಕಂಪನಿಗಳಾದ ಯುಫೋನ್ ಹಾಗೂ ಚೀನಾ ಮೂಲದ ಝಾಂಗ್​ನ ನೆಟ್ವರ್ಕ್​ ಸಿಕ್ಕಿತ್ತು.

-masthmagaa.com

Contact Us for Advertisement

Leave a Reply