ಪಾಕ್‌ನಲ್ಲಿ ಪೇಪರ್‌ ಕೊರತೆ! ಪಾಸ್‌ಪೋರ್ಟ್‌ ಪ್ರಿಂಟ್‌ ಮಾಡೋಕೆ ಪರದಾಟ

masthmagaa:

ಪಾಕಿಸ್ತಾನದಲ್ಲಿ ಪಾಸ್‌ಪೋರ್ಟ್‌ ಪ್ರಿಂಟ್‌ ಮಾಡೋಕೆ ಬೇಕಾಗೋ ಲ್ಯಾಮಿನೇಶನ್‌ ಪೇಪರ್‌ ಖಾಲಿಯಾಗಿದೆಯಂತೆ. ಹಾಗಾಗಿ ಶಿಕ್ಷಣ, ಕೆಲಸ, ಪ್ರವಾಸಕ್ಕೆ ವಿದೇಶಗಳಿಗೆ ಹೊರಟಿರೊ ಸಾವಿರಾರು ಜನ್ರು ಪಾಸ್‌ಪೋರ್ಟ್‌ ಸಿಗದೆ ಕಂಗಾಲಾಗಿದ್ದಾರೆ. ಬ್ರಿಟನ್‌, ಇಟಲಿಗಳಿಗೆ ಹೋಗೋಕೆ ವೀಸಾ ಅಪ್ರೂವ್‌ ಆಗಿದ್ರೂ, ಪಾಸ್‌ಪೋರ್ಟ್‌ ಸಿಗದೆ ಅಲ್ಲಿನ ವಿದ್ಯಾರ್ಥಿಗಳು ಮನೆಯಲ್ಲೆ ಕೂರುವಂತಾಗಿದೆ. ವಿದ್ಯಾರ್ಥಿಗಳು ಎಲ್ಲಿ ತಮಗೆ ಸಿಕ್ಕಿರೊ ಅವಕಾಶ ಮಿಸ್‌ ಆಗಿ, ತಮ್ಮ ಕನಸುಗಳು ಬಲಿಯಾಗ್ತಾವೊ ಅನ್ನೊ ಭಯದಲ್ಲಿದ್ದಾರೆ. ಅಂದ್ಹಾಗೆ 2013ರಲ್ಲು ಇದೇ ರೀತಿ ಪಾಸ್‌ಪೋರ್ಟ್‌ ಪ್ರಿಂಟರ್‌ಗಳ ಬಾಕಿ ತೀರಿಸದೆ ಪಾಕ್‌ನಲ್ಲಿ ಕಾಗದದ ಕೊರತೆ ಎದುರಾಗಿತ್ತು. ಈಗ್ಲೂ ಸಹ ದಿನಕ್ಕೆ 13 ರಿಂದ 14 ಪಾಸ್‌ಪೋರ್ಟ್‌ಗಳನ್ನಷ್ಟೇ ನೀಡಲಾಗ್ತಿದೆ ಅಂತ ಗೊತ್ತಾಗಿದೆ. ʻಆದಷ್ಟು ಬೇಗ ಪರಿಸ್ಥಿತಿಯನ್ನ ಕಂಟ್ರೋಲ್‌ಗೆ ತಗೊಂಡು ಪಾಸ್‌ಪೋರ್ಟ್‌ ನೀಡೋ ಪ್ರಕ್ರಿಯೆಯನ್ನ ಶುರು ಮಾಡ್ತೀವಿʼ ಅಂತ ಅಲ್ಲಿನ ಅಧಿಕಾರಿಯೊಬ್ರು ಹೇಳಿದ್ದಾರೆ.

-masthmagaa

Contact Us for Advertisement

Leave a Reply