ಯುದ್ಧದ ನಡುವೆ ರಾಜಿನಾಮೆ ನೀಡಿದ ಪ್ಯಾಲಸ್ತೀನ್‌ ಪ್ರಧಾನಿ!

masthmagaa.com:

ಇಸ್ರೇಲ್‌ ಹಮಾಸ್‌ ಯುದ್ಧದ ನಡುವೆಯೇ ಪ್ಯಾಲಸ್ತೀನ್‌ ಪ್ರಧಾನಿ ಮೊಹಮದ್‌ ಸ್ಟಾಯೇಹ್‌ ತಮ್ಮ ಹುದ್ದೆಗೆ ರಾಜಿನಾಮೆ ನೀಡಿದ್ದಾರೆ. ಅಮೆರಿಕ ಬಹಳ ದಿನಗಳಿಂದ ಪ್ಯಾಲಸ್ತೀನ್‌ ಅಧ್ಯಕ್ಷ ಮಹ್ಮೊದ್‌ ಅಬ್ಬಾಸ್‌ ಬಳಿ, ಪ್ಯಾಲಸ್ತೀನ್‌ ಆಡಳಿತವನ್ನ ರೀವ್ಯಾಂಪ್‌ ಮಾಡಿ ಅಂತ ಒತ್ತಾಯಿಸಿತ್ತು. ಅಲ್ಲದೆ ಯುದ್ಧ ಮುಗಿದ ನಂತರ ಪ್ಯಾಲಸ್ತೀನ್‌ನಲ್ಲಿ ಹೊಸ ಪೊಲಿಟಿಕಲ್‌ ಸ್ಟ್ರಕ್ಚರ್‌ ರೂಪಿಸಬೇಕು ಅಂತ ಪ್ರೆಶರ್‌ ಹಾಕಿತ್ತು. ಇದೀಗ ಖುದ್ದು ಸ್ಟಾಯೇಹ್‌ ತಮ್ಮ ಸ್ಥಾನಕ್ಕೆ ರಿಸೈನ್‌ ಮಾಡಿದ್ದಾರೆ. ಈ ಬೆಳವಣಿಗೆ ಯುದ್ಧದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ ಅಂತ ಕಾದು ನೋಡ್ಬೇಕಿದೆ.

-masthmagaa.com

Contact Us for Advertisement

Leave a Reply