ಡೆಲಿವರಿ ಬಾಯ್​ಗೂ ವಕ್ಕರಿಸಿತು ಕೊರೋನಾ ವೈರಸ್..!

masthmagaa.com:

ಜಾಗತಿಕವಾಗಿ 3,800ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿರುವ ಕೊರೋನಾ ವೈರಸ್​ ಇದೀಗ ಡೆಲಿವರಿ ಬಾಯ್​ಗೂ ತಗುಲಿರುವ ಘಟನೆ ನಡೆದಿದೆ. ಅಂದ್ಹಾಗೆ ಈ ಘಟನೆ ನಡೆದಿರುವುದು ನಮ್ಮ ದೇಶದಲ್ಲಿ ಅಲ್ಲ, ಬದಲಾಗಿ ಜಪಾನ್​ನಲ್ಲಿ. ಜಪಾನ್​ನ ಸಾಗವಾ ಎಕ್ಸ್​ಪ್ರೆಸ್​ ಕಂಪನಿಯ 60 ವರ್ಷದ ಡೆಲಿವರಿ ಬಾಯ್​ಗೆ ಸೋಂಕು ತಗುಲಿದೆ. ಹೀಗಾಗಿ ಆ  ವ್ಯಕ್ತಿ ಕೆಲಸ ಮಾಡುತ್ತಿದ್ದ ಘಟಕವನ್ನು ಬಂದ್​ ಮಾಡಲಾಗಿದೆ. ಜೊತೆಗೆ ಆತನ ಸಂಪರ್ಕದಲ್ಲಿದ್ದವರು ತಮ್ಮ ತಮ್ಮ ಮನೆಯಲ್ಲೇ ಇರುವಂತೆ ಕಂಪನಿ ಪ್ರಕಟಣೆ ಹೊರಡಿಸಿದೆ.

ಇನ್ನು ಕೊರೋನಾ ವೈರಸ್ ಹರಡದಂತೆ ತಡೆಯಲು ಕತಾರ್ ದೇಶ ಭಾರತ ಸೇರಿದಂತೆ 14 ದೇಶಗಳ ಪ್ರಯಾಣಿಕರ ಆಗಮನದ ಮೇಲೆ ತಾತ್ಕಾಲಿಕ ನಿರ್ಬಂಧ ಹೇರಿದೆ. ಹೀಗಾಗಿ ಚೀನಾ, ಭಾರತ, ಈಜಿಪ್ಟ್​, ಇರಾಕ್, ಇರಾನ್, ಲೆಬನಾನ್, ಬಾಂಗ್ಲಾದೇಶ, ನೇಪಾಳ, ಪಾಕಿಸ್ತಾನ, ಫಿಲಿಪ್ಪೀನ್ಸ್, ದಕ್ಷಿಣ ಕೊರಿಯಾ, ಶ್ರೀಲಂಕಾ, ಸಿರಿಯಾ ಹಾಗೂ ಥಾಯ್​ಲ್ಯಾಂಡ್ ದೇಶಗಳ ಪ್ರಯಾಣಿಕರು ಕತಾರ್​ಗೆ ಹೋಗುವಂತಿಲ್ಲ. ಕತಾರ್​ ಏರ್​ವೇಸ್​ ಕೂಡ ಇಟಲಿಗೆ ಹಾಗೂ ಇಟಲಿಯಿಂದ ತನ್ನ ಹಾರಾಟವನ್ನು ಸಂಪೂರ್ಣವಾಗಿ ಬಂದ್ ಮಾಡಿದೆ.

-masthmagaa.com

Contact Us for Advertisement

Leave a Reply