ನಿಶ್ಚಿತಾರ್ಥ ಮಾಡಿಕೊಂಡು ವದಂತಿಗಳಿಗೆ ಬ್ರೇಕ್‌ ಹಾಕಿದ ಪರಿಣೀತಿ ಚೋಪ್ರಾ !

masthmagaa.com:

ಎಎಪಿ ಸಂಸದ ರಾಘವ್‌ ಚಡ್ಡಾ ಹಾಗೂ ನಟಿ ಪರಿಣೀತಿ ಚೋಪ್ರಾ ಒಬ್ಬರನ್ನೊಬ್ಬರು ಇಷ್ಟ ಪಡುತ್ತಿದ್ದರು. ಸೋಷಿಯಲ್‌ ಮೀಡಿಯಾದಲ್ಲಿ ಇಬ್ಬರು ಡೇಟ್‌ ಮಾಡುತ್ತಿದ್ದಾರೆ ಎಂಬ ವದಂತಿಗಳು ಹಬ್ಬಿದ್ದವು. ಇದೀಗ ಆ ವದಂತಿಗಳು ನಿಜವಾಗಿವೆ. ರಾಘವ್‌ ಚಡ್ಡಾ ಹಾಗೂ ಪರಿಣೀತಿ ಚೋಪ್ರಾ ಅವರ ನಿಶ್ಚಿತಾರ್ಥ ದೆಹಲಿಯ ಖಾಸಗಿ ಹೋಟೆಲ್‌ವೊಂದರಲ್ಲಿ ನೆರವೇರಿದೆ.

ಶುಕ್ರವಾರ ಪರಿಣೀತಿ ಅವರ ಮನೆಯನ್ನು ಲೈಟಿಂಗ್ಸ್‌ನಿಂದ ಶೃಂಗರಿಸಲಾಗಿತ್ತು. ಯಾವುದೇ ಹಬ್ಬವಿಲ್ಲದಿದ್ದರು ಮನೆಯನ್ನು ಶೃಂಗರಿಸಿದ್ದಾರೆ ಅಂದರೆ ಖಂಡಿತವಾಗಿಯು ಪರಣೀತಿ ಚೋಪ್ರಾ ಅವರ ನಿಶ್ಚಿತಾರ್ಥ ಇದೆ ಎಂದು ಸುದ್ದಿಯಾಗಿತ್ತು. ಆದರೆ ನಿಶ್ಚಿತಾರ್ಥದ ಕುರಿತು ಯಾವುದೇ ಅಧಿಕೃತ ಮಾಹಿತಿ ನೀಡಿರಲಿಲ್ಲ.

ನಿನ್ನೆ ದೆಹಲಿಯ ಖಾಸಗಿ ಹೋಟೆಲ್‌ವೊಂದರಲ್ಲಿ ಹಿರಿಯರ ಸಮಕ್ಷಮದಲ್ಲಿ ರಾಘವ್‌ ಚಡ್ಡಾ ಹಾಗೂ ಪರಿಣೀತಿ ಚೋಪ್ರಾ ಅವರ ನಿಶ್ಚಿತಾರ್ಥ ನಡೆದಿದೆ. ಈ ಶುಭಸಮಾರಂಭದಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಲಂಡನ್‌ನಲ್ಲಿ ರಾಘವ್‌ ಚಡ್ಡಾ ಹಾಗೂ ಪರಿಣೀತಿ ಚೋಪ್ರಾ ಒಟ್ಟಿಗೆ ಓದಿದ್ದಾರೆ. ಅಲ್ಲಿಂದ ಇಬ್ಬರಿಗೂ ಪರಿಚಯವಾಗಿ ಇಬ್ಬರು ಒಬ್ಬರನ್ನೊಬ್ಬರು ಇಷ್ಟಪಟ್ಟು ಪ್ರೀತಿಸಿದ್ದಾರೆ. ತುಂಬಾ ದಿನಗಳಿಂದ ಇಬ್ಬರು ಬೇರೆ ಬೇರೆ ಕಡೆ ಒಟ್ಟಿಗೆ ಕಾಣಿಸಿಕೊಂಡು ಬಹಳಷ್ಟು ಸುದ್ದಿಯಲ್ಲಿದ್ದರು. ಇಬ್ಬರು ಡೇಟ್‌ ಮಾಡುತ್ತಿದ್ದಾರೆ ಎಂದು ಸೋಷಿಯಲ್‌ ಮೀಡಿಯಾಗಳಲ್ಲಿ ಇಬ್ಬರದ್ದು ಪೋಟೋಗಳು ಹರಿದಾಡುತ್ತಿದ್ದವು.

ನಿಶ್ಚಿತಾರ್ಥದ ಪೋಟೋಗಳನ್ನು ಪರಿಣೀತಿ ಚೋಪ್ರಾ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇಬ್ಬರು ತಿಳಿ ಬಿಳಿ ಬಣ್ಣದ ಬಟ್ಟೆ ತೊಟ್ಟು ಮಿಂಚಿದ್ದಾರೆ. ಕ್ಯಾಮಾರಾಗೆ ಇಬ್ಬರು ಅದ್ಬುತವಾಗಿ ಪೋಸ್‌ ಕೊಟ್ಟಿದ್ದಾರೆ. ಒಬ್ಬರಿಗೊಬ್ಬರು ಕೈ ಹಿಡಿದುಕೊಂಡು ನಿಶ್ಚಿತಾರ್ಥದ ಉಂಗುರ ಕಾಣುವಂತೆ ಪೋಟೋ ತೆಗೆಸಿಕೊಂಡಿದ್ದಾರೆ. ಅಭಿಮಾನಿಗಳು ಈ ಕ್ಯೂಟ್‌ ಜೋಡಿಯ ಪೋಟೋ ಲೈಕ್‌ ಮಾಡಿ ಅಭಿನಂದನೆಗಳು ಎಂದು ಕಾಮೆಂಟ್‌ ಮಾಡುತ್ತಿದ್ದಾರೆ.

-masthmagaa.com

Contact Us for Advertisement

Leave a Reply