ಲೈಂಗಿಕ ಕಿರುಕುಳ’ ಬಗ್ಗೆ ಮತ್ತೆ ಉಲ್ಟಾ ಹೊಡೆದ ಚೀನಾದ ಟೆನ್ನಿಸ್​ ತಾರೆ

masthmagaa.com:

ನಾನು ಯಾವತ್ತು, ಯಾರ ಮೇಲು ಲೈಂಗಿಕ ದೌರ್ಜನ್ಯದ ಆರೋಪ ಮಾಡಿಲ್ಲ ಅಂತ ಚೀನಾದ ಟೆನಿಸ್‌ ತಾರೆ ಪೆಂಗ್‌ ಶುವಾಯಿ ಮತ್ತೆ ತಮ್ಮ ಆರೋಪವನ್ನ ಅಲ್ಲಗಳೆದಿದ್ದಾರೆ. ಪೆಂಗ್​ ಶುವಾಯಿ ನವೆಂಬರ್‌ನಲ್ಲಿ ಚೀನಾದ ಸಾಮಾಜಿಕ ಜಾಲತಾಣ ವೀಬೋದಲ್ಲಿ ಮಾಡಿದ ಪೋಸ್ಟ್‌ನಲ್ಲಿ, ಚೀನಾದ ಮಾಜಿ ಉಪ ಪ್ರಧಾನಿ ಝಾಂಗ್‌ ಗಾವೊಲಿ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ರು. ಆದ್ರೆ ತಕ್ಷಣವೇ ಪೋಸ್ಟ್‌ ಡಿಲೀಟ್‌ ಆಗಿತ್ತು. ಜೊತೆಗೆ ಮೂರು ವಾರಗಳ ಕಾಲ ಪೆಂಗ್‌ ನಾಪತ್ತೆಯಾಗಿದ್ರು. ಅದಾದ್ಮೇಲೆ ಕೆಲವು ಕ್ರೀಡಾ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಅವ್ರು ಡಿಸೆಂಬರ್‌ನಲ್ಲಿ, ನಾನು ಆರೋಪ ಮಾಡೇ ಇಲ್ಲ ಅಂತ ಅಂದಿದ್ರು. ಜೊತೆಗೆ ಆ ಪೋಸ್ಟ್‌ನ ತಾನೇ ವೀಬೋದಿಂದ ಡಿಲೀಟ್‌ ಮಾಡಿದ್ದಾಗಿ ಕೂಡ ಹೇಳಿದ್ದರು. ಆದ್ರೆ ಇಂಟರ್‌ನೆಟ್‌ನಲ್ಲಿ ತನ್ನ ವಿರುದ್ಧ ಏನೂ ಬರದಂತೆ ಕಟ್ಟುನಿಟ್ಟಾಗಿ ಸೆನ್ಸಾರ್‌ ಮಾಡುವ ಚೀನಾ ಸರ್ಕಾರನೇ ಅದನ್ನ ಡಿಲೀಟ್‌ ಮಾಡಿರಬಹುದು, ಪೆಂಗ್ ಶುವಾಯಿ ಮೇಲೆ ಒತ್ತಡ ಹೇರ್ತಿರಬಹುದು ಅಂತ ಹೇಳಲಾಗ್ತಿತ್ತು. ಇದೀಗ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು ನಾನು ಯಾವತ್ತು, ಯಾರ ಮೇಲೆಯೂ ಲೈಂಗಿಕ ದೌರ್ಜನ್ಯದ ಆರೋಪ ಮಾಡಿಲ್ಲ ಎಂದಿದ್ದಾರೆ.

-masthmagaa.com

Contact Us for Advertisement

Leave a Reply