masthmagaa.com:

ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಕೊರೋನಾ ಪ್ರಕರಣ ಹೆಚ್ಚಾಗಿರೋ ಹಿನ್ನೆಲೆ ಮಾತನಾಡಿರೋ ಆರೋಗ್ಯ ಸಚಿವ ಡಾ.ಕೆ. ಸುಧಾಕರ್, ಜೀನೋಮ್​ ಸೀಕ್ವೆನ್ಸಿಂಗ್​ ವೇಳೆ ದೇಶದ ಕೆಲವರಲ್ಲಿ ಡಬಲ್ ಮ್ಯೂಟೆಟೆಡ್ (ಎರಡು ಬಾರಿ ರೂಪಾಂತರಗೊಂಡ)​ ಕೊರೋನಾ ವೈರಾಣು ಕಾಣಿಸಿಕೊಂಡಿದೆ. ನಮ್ಮ ರಾಜ್ಯದಲ್ಲಿ ಇನ್ನೂ ಅದು ಕಾಣಿಸಿಕೊಂಡಿಲ್ಲ. ಅದರ ಬಗ್ಗೆ ಅಧ್ಯಯನ ನಡೆಯುತ್ತಿದೆ. ಎರಡು ಬಾರಿ ರೂಪಾಂತರಗೊಂಡಿರೋ ವೈರಾಣು ವೇಗವಾಗಿ ಹರಡುತ್ತೆ ಅಂತ ತಜ್ಞರು ಹೇಳ್ತಿದ್ದಾರೆ. ಹೀಗಾಗಿ ಮುಂದಿನ ಎರಡು ತಿಂಗಳು ಜನರು ತುಂಬಾ ಎಚ್ಚರಿಕೆಯಿಂದ ಇರಬೇಕು. 45 ವರ್ಷ ದಾಟಿದ ಎಲ್ಲರೂ ದಯವಿಟ್ಟು ಲಸಿಕೆ ಹಾಕಿಸಿಕೊಳ್ಳಿ. ಯಾವುದೇ ಕಾರಣಕ್ಕೂ ಸೋಂಕಿತರ ಸಂಖ್ಯೆ ಹೆಚ್ಚಾಗಬಾರ್ದು. ಬೆಂಗಳೂರಲ್ಲಿ ಕೊರೋನಾ ಜಾಸ್ತಿಯಾಗಿದೆ. ಕೊರೋನಾ ಮಾರ್ಗಸೂಚಿ ಕೂಡ ಬಿಡುಗಡೆ ಮಾಡಿದ್ದೇವೆ. ಕೆಮ್ಮು, ಜ್ವರ ಕಾಣಿಸಿಕೊಂಡರೆ ತಕ್ಷಣ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿಕೊಳ್ಳಿ. ಇದರ ಬಗ್ಗೆ ನಿರ್ಲಕ್ಷ್ಯ ಬೇಡ. ಇನ್ನು ಚುನಾವಣೆ ಅಂದ್ರೆ ಕೊರೋನಾ ಬರಲ್ವಾ? ಬರುತ್ತಲ್ವಾ.. ಹೀಗಾಗಿ ಉಪಚುನಾವಣೆಗೆ ಸಂಬಂಧಿಸಿದಂತೆ ಎಲ್ಲಾ ಪಕ್ಷಗಳಿಗೂ ಒಂದು ಮಾರ್ಗಸೂಚಿ ಬಿಡುಗಡೆ ಮಾಡುವಂತೆ ರಾಜ್ಯ ಚುನಾವಣಾ ಆಯುಕ್ತರಿಗೆ ಮನವಿ ಮಾಡ್ತೀನಿ. ಸಿನಿಮಾ ನಟ, ನಟಿಯರು ಸ್ವಯಂಪ್ರೇರಿತರಾಗಿ ಕೊರೋನಾ ರಾಯಭಾರಿಗಳ ರೀತಿ ಕೆಲಸ ಮಾಡಬೇಕು. ಅಭಿಮಾನಿಗಳಲ್ಲಿ ಅರಿವು ಮೂಡಿಸಬೇಕು ಅಂತ ಹೇಳಿದ್ರು.

-masthmagaa.com

Contact Us for Advertisement

Leave a Reply