ದುಬಾರಿ ದುನಿಯಾ: ಪೆಟ್ರೋಲ್, ಡೀಸೆಲ್, LPG ಗ್ಯಾಸ್​ ಎಲ್ಲವೂ ಕಾಸ್ಟ್ಲಿ!

masthmagaa.com:

ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ನಿರಂತರ 7ನೇ ದಿನವೂ ಏರಿಕೆ ಕಂಡಿದೆ. ಬೆಂಗಳೂರಿನಲ್ಲಿ ಒಂದು ಲೀಟರ್ ಪೆಟ್ರೋಲ್ ದರ 21 ಪೈಸೆ ಜಾಸ್ತಿಯಾಗಿ 91.97 ರೂಪಾಯಿ ಆಗಿದೆ. ಅದೇ ರೀತಿ ಪ್ರತಿ ಲೀಟರ್​ ಡೀಸೆಲ್ ದರ 25 ಪೈಸೆ ಜಾಸ್ತಿಯಾಗಿ 84.12 ರೂಪಾಯಿ ಆಗಿದೆ. ಜನಸಾಮಾನ್ಯರ ಮೇಲೆ ಪೆಟ್ರೋಲ್​-ಡೀಸೆಲ್ ಬರೆ ಬೆನ್ನಲ್ಲೇ ಇವತ್ತಿಂದ LPG ಅಡುಗೆ ಅನಿಲ ಕೂಡ ದುಬಾರಿಯಾಗಿದೆ. 14.2 ಕೆಜಿ ಸಿಲಿಂಡರ್ ದರ 50 ರೂಪಾಯಿ ಜಾಸ್ತಿಯಾಗಿದೆ. ಬೆಂಗಳೂರಿನಲ್ಲಿ ಸಬ್ಸಿಡಿ ರಹಿತ ಸಿಲಿಂಡರ್ ದರ 772 ರೂಪಾಯಿ ಆಗೋಗಿದೆ. 10 ದಿನಗಳ ಹಿಂದಷ್ಟೇ 25 ರೂಪಾಯಿ ಜಾಸ್ತಿ ಮಾಡಲಾಗಿತ್ತು. ಈಗ ಮತ್ತೆ 50 ರೂಪಾಯಿ ಜಾಸ್ತಿ ಮಾಡಲಾಗಿದೆ.

ಇನ್ನು ಎಲ್​ಪಿಜಿ ಅಡುಗೆ ಅನಿಲ ದರ ಹೆಚ್ಚಾಗಿರೋದಕ್ಕೆ ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕೇಂದ್ರ ಸರ್ಕಾರ ಸಾರ್ವಜನಿಕರ ಹಣವನ್ನ ಲೂಟಿ ಮಾಡಿ, ಇಬ್ಬರು ವ್ಯಕ್ತಿಗಳ ಅಭಿವೃದ್ಧಿಗೆ ಮಾತ್ರ ಸಹಕರಿಸುತ್ತಿದೆ ಅಂತ ಟ್ವೀಟ್ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply