masthmagaa.com:

ಒಬ್ಬ ಆಟಗಾರನಾಗಿ ಐಪಿಎಲ್​ನಲ್ಲಿ ಆಡೋದಕ್ಕಿಂತ ಪಾಕಿಸ್ತಾನ ಸೂಪರ್ ಲೀಗ್, ಶ್ರೀಲಂಕಾ ಪ್ರೀಮಿಯರ್ ಲೀಗ್​ಗಳಲ್ಲಿ ಆಡೋದು ಚೆನ್ನಾಗಿರುತ್ತೆ ಅಂತ ಸೌತ್ ಆಫ್ರಿಕಾ ವೇಗಿ ಡೇಲ್ ಸ್ಟೇಯ್ನ್ ಹೇಳಿದ್ದಾರೆ. ಐಪಿಎಲ್​ನಲ್ಲಿ ಪ್ಯೂರ್ ಕ್ರಿಕೆಟ್​ ಬದಲು ಆಟಗಾರರು ಎಷ್ಟು ಹಣ ಪಡೀತಾರೆ ಅನ್ನೋದಕ್ಕೆ ಹೆಚ್ಚು ಮಹತ್ವ ಕೊಡಲಾಗುತ್ತೆ. ಪಾಕ್ ಅಥವಾ ಶ್ರೀಲಂಕಾ ಪ್ರೀಮಿಯರ್​ ಲೀಗ್​ನಲ್ಲಿ ಕ್ರಿಕೆಟ್​ಗೆ ಹೆಚ್ಚು ಮಹತ್ವ ಕೊಡ್ತಾರೆ. ಹೀಗಾಗಿ ಐಪಿಎಲ್​ಗಿಂತ ಬೇರೆ ಪ್ರೀಮಿಯರ್ ಲೀಗ್​ಗಳಲ್ಲಿ ಆಡೋಕೆ ನಂಗೆ ಖುಷಿಯಾಗುತ್ತೆ ಅಂತ ಸ್ಟೇಯ್ನ್ ಹೇಳಿದ್ದಾರೆ. ಕಳೆದ ವರ್ಷ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಕಾಣಿಸಿಕೊಂಡಿದ್ದ ಸ್ಟೇಯ್ನ್ ಈ ವರ್ಷದ ಐಪಿಎಲ್​ನಿಂದ ಹೊರಗುಳಿದಿದ್ದಾರೆ. ತಾವಾಗಿಯೇ ಐಪಿಎಲ್​ನಿಂದ ಹೊರಗುಳಿಯೋಕೆ ಕಾರಣ ಏನು ಅನ್ನೋದನ್ನ ಈಗ ಹೇಳಿದ್ದಾರೆ. ಸದ್ಯ ಪಾಕಿಸ್ತಾನ ಪ್ರೀಮಿಯರ್ ಲೀಗ್​ನಲ್ಲಿ ಕ್ವೆಟ್ಟಾ ಗ್ಲಾಡಿಯೇಟರ್ಸ್ ಪರವಾಗಿ ಸ್ಟೇಯ್ನ್ ಆಡ್ತಿದ್ದಾರೆ.

-masthmagaa.com

Contact Us for Advertisement

Leave a Reply