ಪಶ್ಚಿಮ ಬಂಗಾಳ, ಬಿಹಾರ್‌ನ ಯೋಜನೆಗಳಿಗೆ ಮೋದಿ ಚಾಲನೆ!

masthmagaa.com:

ಪೂರ್ವ ರಾಜ್ಯಗಳ ಪ್ರವಾಸದಲ್ಲಿರೋ ಪಿಎಂ ಮೋದಿ, ಇಲ್ಲಿನ ನಾಡಿಯಾ ಜಿಲ್ಲೆಯಲ್ಲಿ ಸುಮಾರು 15 ಸಾವಿರ ಕೋಟಿ ಮೌಲ್ಯದ ಯೋಜನೆಗಳ ಅಡಿಪಾಯ, ಲೋಕಾರ್ಪಣೆ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಮುಖ್ಯವಾಗಿ ರಘುನಾತ್‌ಪುರದ ಉಷ್ಣವಿದ್ಯುತ್‌ ಸ್ಥಾವರದ ಎರಡನೇ ಹಂತದ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದಾರೆ. ನಂತರ ಬಿಹಾರದ ಔರಂಗಾಬಾದ್‌ನಲ್ಲಿ 21.4 ಸಾವಿರ ಕೋಟಿ ಮೌಲ್ಯದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದಾರೆ. ಇನ್ನು ಪಶ್ಚಿಮ ಬಂಗಾಳದ ರ‍್ಯಾಲಿ ಒಂದ್ರಲ್ಲಿ ಪಿಎಂ ಮೋದಿ TMC ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಗಳ ಯೋಜನೆಯಲ್ಲಿ ಇಲ್ಲಿನ ಸರ್ಕಾರ ಲೂಟಿ ಮಾಡಿದೆ. TMC ಅಂದ್ರೆ ತೃಣಮೂಲ ಕಾಂಗ್ರೆಸ್‌ ಅಲ್ಲ. TMC ಅಂದ್ರೆ ತೂ, ಮೈ ಔರ್‌ ಕರಪ್ಶನ್..‌ ಅಂದ್ರೆ ನೀನು, ನಾನು ಹಾಗೂ ಭ್ರಷ್ಟಾಚಾರ ಅಂತ ಟೀಕಿಸಿದ್ದಾರೆ. ಅತ್ತ ಬಿಹಾರದ ರ್ಯಾಲಿಯಲ್ಲಿ ಸಿಎಂ ನಿತೀಶ್‌ ಕುಮಾರ್‌, ನಾನು ಇನ್ಮೇಲೆ ಎಂದಿಗೂ NDA ಜೊತೆ ಇರ್ತೇನೆ. ಬೇರೆ ಪಕ್ಷಕ್ಕೆ ಸಪೋರ್ಟ್‌ ಮಾಡಲ್ಲ ಅಂತ ಪಿಎಂ ಮೋದಿಗೆ ಪ್ರಾಮಿಸ್‌ ಮಾಡಿ ಹಾಸ್ಯಚಟಾಕಿ ಹಾರಿಸಿದ್ದಾರೆ.

-masthmagaa.com

Contact Us for Advertisement

Leave a Reply