ಕೊರೋನಾ 2ನೇ ಅಲೆ: ಮೋದಿ ಭಾಷಣದ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ

masthmagaa.com:

ಕೊರೋನಾ 2ನೇ ಅಲೆ ಹಿನ್ನೆಲೆ ವಿವಿಧ ರಾಜ್ಯದ ಸಿಎಂಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಪ್ರಧಾನಿ ಮೋದಿ ಬಳಿಕ ದೇಶವನ್ನು ಉದ್ದೇಶಿಸಿ ಮಾತನಾಡಿದ್ರು. ಅವರ ಭಾಷಣದ ಹೈಲೆಟ್ಸ್ ಇಲ್ಲಿದೆ ನೋಡಿ..

‘ದೇಶದ ಮುಂದೆ ಮತ್ತೊಮ್ಮೆ ಸವಾಲಿನ ಪರಿಸ್ಥಿತಿ ಎದುರಾಗಿದೆ. ಕೊರೋನಾ ಎರಡನೇ ಅಲೆ ವಿರುದ್ಧ ನಾವು ಹೋರಾಡಬೇಕು. ಮಹಾರಾಷ್ಟ್ರ, ಗುಜರಾತ್, ಛತ್ತೀಸ್​ಗಢ, ಪಂಜಾಬ್​ನಲ್ಲಿ ಕೊರೋನಾ ಜಾಸ್ತಿಯಾಗಿದೆ. ಇದು ಗಂಭೀರವಾದ ವಿಚಾರ. ಕೆಲವೊಂದು ರಾಜ್ಯಗಳಲ್ಲಿ ಆಡಳಿತವರ್ಗ ರಿಲ್ಯಾಕ್ಸ್ ಆಗಿದೆ. ಆದ್ರೆ ಇದು ಯುದ್ಧೋಪಾದಿಯಲ್ಲಿ ಕೆಲಸ ಮಾಡುವ ಸಮಯ. ಕೆಲವೊಂದು ರಾಜ್ಯಗಳಲ್ಲಿ ನೈಟ್​ ಕರ್ಫ್ಯೂ ಜಾರಿಗೆ ತರಲಾಗಿದೆ. ನೈಟ್​ ಕರ್ಫ್ಯೂ ಅನ್ನೋ ಬದಲು ಅದರ ಜೊತೆ ಕೊರೋನಾ ಅನ್ನೋ ಶಬ್ದವನ್ನ ಸೇರಿಸಿ. ಇದರಿಂದ ಜನರಲ್ಲಿ ಕೊರೋನಾದಿಂದ ಇದನ್ನ ಹೇರಿರೋದು ಅಂತ ಗೊತ್ತಾಗುತ್ತೆ. ರಾತ್ರಿ ಮಾತ್ರ ಕೊರೋನಾ ಬರುತ್ತಾ ಅಂತ ಕೆಲವರು ವ್ಯಂಗ್ಯವಾಡ್ತಿದ್ದಾರೆ. ಆದ್ರೆ ಜಗತ್ತಿನ ಬಹುತೇಕ ದೇಶಗಳು ನೈಟ್ ಕರ್ಫ್ಯೂ ಅನ್ನ ಒಪ್ಪಿಕೊಂಡಿವೆ. ಇದರಿಂದ ಜನ ತಾವು ಕೊರೋನಾ ಕಾಲದಲ್ಲಿ ಬದುಕುತ್ತಿದ್ದೇವೆ ಅನ್ಕೊಳ್ತಾರೆ. ಈಗ ನಮ್ಮ ಬಳಿ ಕೊರೋನಾ ವಿರುದ್ಧ ಹೋರಾಡುವ ಎಲ್ಲಾ ಅಸ್ತ್ರ ಇದೆ. ಅನುಭವ, ಸಂಪನ್ಮೂಲ, ಲಸಿಕೆ ಎಲ್ಲವೂ ಇದೆ. ಹೀಗಾಗಿ ಈಸಲ ಮೈಕ್ರೋ ಕಂಟೈನ್​ಮೆಂಟ್​ ಝೋನ್​ ಮೇಲೆಯೇ ಹೆಚ್ಚು ಗಮನಹರಿಸಿ. ಕೊರೋನಾ ಲಸಿಕೆ ಜೊತೆಗೆ ಕೊರೋನಾ ಪರೀಕ್ಷೆಗೆ ಹೆಚ್ಚು ಒತ್ತು ಕೊಡಬೇಕು. ಕೊರೋನಾ ಪರೀಕ್ಷೆ ಬಗ್ಗೆ ನಿರ್ಲಕ್ಷ್ಯ ಬೇಡ. ಪಾಸಿಟಿವಿಟಿ ರೇಟ್​ ಅನ್ನ 5 ಪರ್ಸೆಂಟ್​ ಕೆಳಗೆ ಇರುವಂತೆ ನೋಡಿಕೊಳ್ಳಿ. ಹೆಚ್ಚೆಚ್ಚು ಕೊರೋನಾ ಪರೀಕ್ಷೆ ಮಾಡಿದ್ರೆ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ ಅಂತ ಯಾವ ರಾಜ್ಯವೂ ತಲೆ ಕೆಡಿಸಿಕೊಳ್ಳಬಾರದು. ಪಾಸಿಟಿವ್ ಕೇಸ್ ಜಾಸ್ತಿ ಬಂದ್ರೆ ಬರಲಿ. ಎಷ್ಟು ಜನರಿಗೆ ಸೋಂಕು ತಗುಲಿದೆ ಅಂತ ಗೊತ್ತಾದ ಬಳಿಕವಷ್ಟೇ ನಾವೇನಾದ್ರೂ ಮಾಡಲು ಸಾಧ್ಯ ಅಲ್ಲವೇ.. ಕೊರೋನಾ ಪರೀಕ್ಷೆಗೆ ಸ್ಯಾಂಪಲ್​ಗಳನ್ನ ಪಡೆದುಕೊಳ್ಳುವಾಗ ಸೂಜಿಯನ್ನ ಮೇಲೆ​ ಮೇಲೆನೇ ಹಾಕಬೇಡಿ. ಸ್ವಲ್ಪ ಒಳಗೆ ಹಾಕಿ ಸ್ಯಾಂಪಲ್ ಪಡೆಯಿರಿ. ಒಬ್ಬ ಕೊರೋನಾ ಸೋಂಕಿತ ಪತ್ತೆಯಾದ್ರೆ ಆತನ ಸಂಪರ್ಕಕ್ಕೆ ಬಂದ ಕನಿಷ್ಠ 30 ಜನರನ್ನ ಪತ್ತೆಹಚ್ಚಿ. ಕೊರೋನಾ ಲಸಿಕೆ ಹಾಕಲು ನಾವು ನಿರ್ಧರಿಸಿದ ವಯಸ್ಸಿನ ಮಾನದಂಡಗಳು ಸರಿಯಾಗಿದೆ. ಜಗತ್ತಿನ ಬಹುತೇಕ ದೇಶಗಳು ಹೀಗೇ ಮಾಡ್ತಿರೋದು. ಲಸಿಕೆ ಕೊರತೆ ಬಗ್ಗೆ ಕೆಲವೊಂದು ರಾಜ್ಯಗಳು ಹೇಳಿವೆ. ರಾತ್ರೋರಾತ್ರಿ ಲಸಿಕೆ ಉತ್ಪಾದನಾ ಕಾರ್ಖಾನೆಯನ್ನ ತೆರಯಲು ಸಾಧ್ಯವಿಲ್ಲ ಅಂತ ನಿಮಗೂ ಗೊತ್ತು. ನಮ್ಮ ಬಳಿ ಏನಿದೆಯೋ ಅದರಲ್ಲೇ ಅಡ್ಜಸ್ಟ್ ಮಾಡಿಕೊಂಡು ಹೋಗಬೇಕು. ಲಸಿಕೆ ಉತ್ಪಾದನೆಯಾಗುವ ಒಂದೇ ರಾಜ್ಯದಲ್ಲಿ ಎಲ್ಲಾ ಲಸಿಕೆ ಇಟ್ಟುಕೊಳ್ಳಲು ಕೂಡ ಸಾಧ್ಯವಿಲ್ಲ. ಏಪ್ರಿಲ್ 11ನೇ ತಾರೀಖು ಜ್ಯೋತಿಬಾ ಫುಲೆ ಅವರ ಜನ್ಮದಿನ. ಏಪ್ರಿಲ್ 14ರಂದು ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನ. ಹೀಗಾಗಿ ಏಪ್ರಿಲ್​ 11ರಿಂದ 14ರವರೆಗೆ ಎಲ್ಲಾ ರಾಜ್ಯಗಳಲ್ಲಿ ಲಸಿಕೆ ಉತ್ಸವವನ್ನ ನಡೆಸೋಣ. ಈ 4 ದಿನದಲ್ಲಿ ಹೆಚ್ಚೆಚ್ಚು ಫಲಾನುಭವಿಗಳು ಲಸಿಕೆ ಪಡೆಯುವಂತೆ ಮಾಡೋಣ. ಕೊರೋನಾ ನಿಯಮಗಳನ್ನ ಪಾಲಿಸುವಂತೆ ದೇಶದ ಯುವಜನತೆ ಎಲ್ಲರಿಗೂ ಪ್ರೇರಣೆ ನೀಡಬೇಕು. ಆಗ ಯಾವ ಶಕ್ತಿಯೂ ನಮ್ಮನ್ನ ತಡೆಯಲು ಸಾಧ್ಯವಿಲ್ಲ. ಎಲ್ಲಾ ರಾಜ್ಯಗಳು ಸರ್ವಪಕ್ಷ ಸಭೆ ನಡೆಸಲಿ. ಎಲ್ಲಾ ಚುನಾಯಿತ ಪ್ರತಿನಿಧಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಲಿ. ಬಳಿಕ ರಾಜ್ಯಪಾಲರ ನೇತೃತ್ವದಲ್ಲಿ ಸಭೆ ನಡೆಸಲಿ. ಇದರಿಂದ ಕೊರೋನಾ ವಿಚಾರದಲ್ಲಿ ರಾಜಕೀಯ ಮಾಡೋದು ಬೇಡ ಅನ್ನೋ ಮನೋಭಾವ ಎಲ್ಲರಿಗೂ ಬರುತ್ತೆ. ಜನರನ್ನ ಹೆದರಿಸುವ ಅವಶ್ಯಕತೆ ಇಲ್ಲ. ಕುಟುಂಬದಲ್ಲಿ ಒಬ್ಬರಿಗೆ ಕೊರೋನಾ ಬಂದ್ರೆ ಉಳಿದ ಸದಸ್ಯರಿಗೂ ಬರ್ತಿದೆ. ಇದಕ್ಕೆ ಕಾರಣ ಸೋಂಕಿತರಲ್ಲಿ ರೋಗದ ಲಕ್ಷಣ ಕಾಣಿಸದಿರೋದು. ಕಳೆದ ಸಲ ಕೊರೋನಾ ವಿರುದ್ಧ ಹೋರಾಟ ನಡೆಸುತ್ತಿದ್ದವು. ಈಗಲೂ ಹೋರಾಟ ಮಾಡುತ್ತೇವೆ ಅನ್ನೋ ನಂಬಿಕೆ ನನಗೆ ಇದೆ. ಎಲ್ಲಾ ರಾಜ್ಯಗಳು ತಮ್ಮ ಸಲಹೆಗಳನ್ನ ಆದಷ್ಟು ಬೇಗ ನನಗೆ ಕಳಿಸಿಕೊಡಿ.’

-masthmagaa.com

Contact Us for Advertisement

Leave a Reply