4 ರಾಜ್ಯ ಗೆಲುವಿನ ಬಳಿಕ ಗುಜರಾತ್ ಯುದ್ಧಕ್ಕೆ ಸಿದ್ಧತೆ ಶುರು!

masthmagaa.com:

ನೆನ್ನೆ ತಾನೆ ಯುಪಿ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ಅಭುತಪೂರ್ವ ಗೆಲುವು ಸಾಧಿಸಿರೋ ಪ್ರಧಾನಿ ನರೇಂದ್ರ ಮೋದಿ ಈಗ ಮುಂದಿನ ಚುನಾವಣಾ ರಾಜ್ಯ ಗುಜರಾತ್‌ನಲ್ಲಿ ಅದ್ಧೂರಿ ರೋಡ್‌ ಶೋ ನಡೆಸಿದ್ದಾರೆ. ಎರಡು ದಿನದ ಭೇಟಿಗೆ ತಮ್ಮ ತವರು ರಾಜ್ಯಕ್ಕೆ ಬಂದಿರೋ ಮೋದಿ ಇಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಹೂವಿನ ಹಾರಗಳಿಂದ ಅಲಂಕೃತಗೊಂಡ ತೆರೆದ ವಾಹನದಲ್ಲಿ ಮೋದಿ ಏರ್‌ಪೋರ್ಟ್‌ನಿಂದ ರಾಜ್ಯ ಬಿಜೆಪಿ ಕಛೇರಿ ಕಮಲಂವರೆಗು 10 ಕಿಲೋಮೀಟರ್​​ಗಳ ರೋಡ್‌ ಶೋ ನಡೆಸಿದ್ರು. ಪ್ರಧಾನಿ ಜೊತೆಯಲ್ಲಿ ಗುಜರಾತ್‌ ಸಿಎಂ ಭೂಪೇಂದ್ರ ಪಟೇಲ್‌, ಬಿಜೆಪಿ ರಾಜ್ಯಾಧ್ಯಕ್ಷ ಸಿಆರ್‌ ಪಾಟಿಲ್‌ ಕಾಣಿಸಿಕೊಂಡ್ರು. ಇನ್ನು ಸಂಜೆ 4 ಗಂಟೆಗೆ ಪಂಚಾಯತ್‌ ಮಹಾಸಮ್ಮೇಳನದಲ್ಲಿ ಭಾಗವಹಿಸಿದ್ರು. ಇದ್ರಲ್ಲಿ ಪಂಚಾಯತ್‌ ರಾಜ್‌ನ 3 ಹಂತದ ಸಂಸ್ಥೆಗಳಿಂದ 1 ಲಕ್ಷ ಸದಸ್ಯರು ಪಾಲ್ಗೊಂಡ್ರು.

-masthmagaa.com

Contact Us for Advertisement

Leave a Reply