ಮೂರು ಅಂಗಗಳು ಲಕ್ಷ್ಮಣರೇಖೆಯನ್ನ ದಾಟಬಾರದು: ಸಿಜೆಐ ಎನ್‌.ವಿ ರಮಣ

masthmagaa.com:

ಸಂವಿಧಾನ ಪ್ರಜಾಪ್ರಭುತ್ವದ ಮೂರು ಅಂಗಗಳ ನಡುವೆ ಲಕ್ಷ್ಮಣ ರೇಖೆಯನ್ನ ಹಾಕಿದೆ ಎಲ್ಲರೂ ಅದನ್ನ ಅರ್ಥ ಮಾಡ್ಕೋಬೇಕು ಅಂತ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಅವ್ರು ಹೇಳಿದ್ದಾರೆ. ದಿಲ್ಲಿಯ ವಿಜ್ಞಾನ ಭವನದಲ್ಲಿ ನಡೆದ ಮುಖ್ಯಮಂತ್ರಿ ಮತ್ತು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳ ಜಂಟಿ ಸಮ್ಮೇಳನದಲ್ಲಿ ಮಾತಾಡಿದ ಅವ್ರು, ಸಂವಿಧಾನ ಪ್ರಜಾಪ್ರಭುತ್ವವನ್ನ ಬಲಪಡಿಸಲು ಮೂರು ಅಂಗಗಳ ನಡುವೆ ಗೆರೆಯನ್ನ ಹಾಕಿದೆ. ನಾವು ಕೆಲ್ಸ ಮಾಡೋವಾಗ ಆ ಲಕ್ಷ್ಮಣ ರೇಖೆ ಬಗ್ಗೆ ಎಚ್ಚರಿಕೆ ಇರ್ಬೇಕು ಅಂತ ಹೇಳಿದ್ದಾರೆ. ಇನ್ನು ದೇಶದಲ್ಲಿ ಹಿಂದಿ ಮತ್ತು ಭಾಷಾ ವೈವಿಧ್ಯತೆ ಬಗ್ಗೆ ಚರ್ಚೆ ನಡೆಯುತ್ತಿರೋ ವೇಳೆ ಸಿಜೆಐ, ಕೋರ್ಟ್‌ಗಳಲ್ಲಿ ಸ್ಥಳೀಯ ಭಾಷೆಗಳನ್ನ ಅಳವಡಿಸೋ ಸಮಯ ಬಂದಿದೆ ಅಂತ ಹೇಳಿದ್ದಾರೆ. ಜೊತೆಗೆ ನ್ಯಾಯಾಂಗ ವ್ಯವಸ್ಥೆಯ ಮೂಲಸೌಕರ್ಯಗಳನ್ನ ಅಭಿವೃದ್ಧಿಪಡಿಸೋಕೆ ಸಮಿತಿಗಳ ಬದಲಾಗಿ ನ್ಯಾಷನಲ್‌ ಜುಡಿಷಿಯಲ್‌ ಇನ್‌ಫ್ರಾಸ್ಟ್ರಕ್ಚರ್‌ ಅಥಾರಿಟಿಯನ್ನ ರಚನೆ ಮಾಡಬೇಕಾಗಿದೆ ಅಂತ ಹೇಳಿದ್ದಾರೆ. ಇದ್ರ ಜೊತೆಗೆ ನ್ಯಾಯಾಲಯದಲ್ಲಿ ಬಾಕಿ ಉಳಿಯುವ ಪ್ರಕರಣಗಳ ಬಗ್ಗೆ ಮಾತಾಡಿರೋ ಅವ್ರು, 50% ಪ್ರಕರಣಗಳು ಸರ್ಕಾರಗಳದ್ದೇ ಇರುತ್ವೆ ಹಾಗಾಗಿ ನ್ಯಾಯಾಂಗವನ್ನ ಮಾತ್ರ ದೂಷಿಸುವ ಬದ್ಲು ಸರ್ಕಾರಗಳು ತಮ್ಮಲ್ಲೇ ಅಂತಹ ಪ್ರಕರಣಗಳನ್ನ ವಿಲೇವಾರಿ ಮಾಡ್ಕೋಬೇಕು. ಜೊತೆಗೆ ಶಿಫಾರಸ್ಸು ಮಾಡಿದ ಹುದ್ದೆಗಳನ್ನ ಬೇಗ ಭರ್ತಿ ಮಾಡಬೇಕು ಅಂತ ಹೇಳಿದ್ದಾರೆ.
ಇನ್ನು ಇದಕ್ಕೂ ಮೊದಲು ಕಾರ್ಯಕ್ರಮವನ್ನ ಉದ್ಘಾಟಿಸಿ ಮತಾಡಿದ ಪ್ರಧಾನಿ ಮೋದಿ ಕೂಡ ಕೋರ್ಟ್‌ಗಳಲ್ಲಿ ಸ್ಥಳೀಯ ಭಾಷೆಗಳನ್ನ ಬಳಸಬೇಕು ಅಂತ ಹೇಳಿದ್ದಾರೆ. ಇದ್ರಿಂದ ಸಾಮಾನ್ಯ ನಾಗರಿಕನಿಗೆ ನ್ಯಾಯಾಂಗ ವ್ಯವಸ್ಥೆಯಲ್ಲಿ ವಿಶ್ವಾಸ ಮೂಡುತ್ತೆ ಅಂತ ಹೇಳಿದ್ದಾರೆ. ಜೊತೆಗೆ ಔಟ್‌ಡೇಟ್‌ ಆಗಿರೋ ಕಾನೂನುಗಳನ್ನ ತೆಗೆದು ಹಾಕಬೇಕು. ಮತ್ತು ವಿಚಾರಣಾಧೀನ ಖೈದಿಗಳನ್ನ ಜೈಲಿನಲ್ಲಿ ಇಡದೇ ಅವಶ್ಯಕತೆ ಇಲ್ಲದಿದ್ರೆ ಕಾನೂನು ಪ್ರಕಾರ ರಿಲೀಸ್‌ ಮಾಡ್ಬೇಕು ಅಂತ ಕೂಡ ಪ್ರಧಾನಿ ಹೇಳಿದ್ದಾರೆ.

Contact Us for Advertisement

Leave a Reply