masthmagaa.com:

ಕೊರೋನಾ ಪರಿಸ್ಥಿತಿಯನ್ನ ಅವಲೋಕಿಸಲು ಪ್ರಧಾನಿ ಮೋದಿ ನಾಳೆ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಲಿದ್ದಾರೆ. ಈ ವೇಳೆ  ಸೋಂಕಿನ ಹಾವಳಿ ಹೆಚ್ಚಾಗಿರುವ ದೆಹಲಿ, ಮಹಾರಾಷ್ಟ್ರ, ಕೇರಳ, ಪಶ್ಚಿಮ ಬಂಗಾಳ, ರಾಜಸ್ಥಾನ ಮುಂತಾದ ರಾಜ್ಯಗಳ ಬಗ್ಗೆ ಹೆಚ್ಚು ಗಮನ ಹರಿಸುವ ಸಾಧ್ಯತೆ ಇದೆ. ಇದರ ಜೊತೆಗೆ ದೇಶದಲ್ಲಿ ಅಂತಿಮ ಹಂತದ ಮಾನವ ಪ್ರಯೋಗದಲ್ಲಿರುವ ಲಸಿಕೆಯ ಪೂರೈಕೆ ಮತ್ತು ತುರ್ತು ಬಳಕೆಗೆ ಅನುಮತಿ ನೀಡುವ ಬಗ್ಗೆಯೂ ನಾಳೆ ಚರ್ಚೆ ನಡೆಸುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಕೆಲವೊಂದು ರಾಜ್ಯಗಳು ಕೊರೋನಾ ಕಂಟ್ರೋಲ್ ಮಾಡಲು ನೈಟ್ ಕರ್ಫ್ಯೂ ಸೇರಿದಂತೆ ಹಲವು ನಿರ್ಬಂಧಕ ಕ್ರಮಗಳನ್ನ ಜಾರಿಗೆ ತರುತ್ತಿವೆ. ಮಹಾರಾಷ್ಟ್ರದಲ್ಲಿ ಮತ್ತೆ ಲಾಕ್​ಡೌನ್​ ಬಗ್ಗೆ ಚಿಂತನೆ ನಡೆಸಲಾಗ್ತಿದೆ. ಇಂತಹ ಸಂದರ್ಭದಲ್ಲೇ ಪ್ರಧಾನಿ ಮೋದಿ ಸಿಎಂಗಳ ಜೊತೆಗೆ  ಮಾತುಕತೆ ನಡೆಸಲು ಮುಂದಾಗಿರೋದು ಕುತೂಹಲ ಕೆರಳಿಸಿದೆ.

-masthmagaa.com

Contact Us for Advertisement

Leave a Reply