ವಿಶ್ವದ ಅತೀದೊಡ್ಡ ಆಫೀಸ್‌ ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ! ಯಾವಾಗ?

masthmagaa.com:

ಜಗತ್ತಿನ ಅತಿದೊಡ್ಡ ಆಫೀಸ್‌ ʻಸೂರತ್‌ ಡೈಮಂಡ್‌ ಬೋರ್ಸ್‌ʼ ಇದೀಗ ಡಿಸೆಂಬರ್‌ 17 ರಂದು ಉದ್ಘಾಟನೆಗೊಳ್ಳೋದ್ರಲ್ಲಿದೆ. ಈ ಬೃಹತ್‌ ಆಫೀಸ್‌ನ್ನ ಪ್ರಧಾನಿ ನರೇಂದ್ರ ಮೋದಿಯವ್ರು ಉದ್ಘಾಟಿಸಲಿದ್ದಾರೆ. ಅಮೆರಿಕದ ಅತ್ಯಂತ ದೊಡ್ಡ ಆಫೀಸ್‌ಗೆ ಟಕ್ಕರ್‌ ಕೊಟ್ಟು ನಿಂತಿರೋ ಭಾರತದ ಈ ನೂತನ ಆಫೀಸ್‌ ಗುಜರಾತ್‌ನ ಸೂರತ್‌ನಲ್ಲಿ ನಿರ್ಮಾಣಗೊಂಡಿದೆ. ಇದ್ರ ನಿರ್ಮಾಣಕ್ಕೆ ಸರಿಸುಮಾರು 3,500 ಕೋಟಿ ರೂಪಾಯಿ ಖರ್ಚಾಗಿದೆ. ಒಟ್ಟು 67 ಲಕ್ಷ ಸ್ಕ್ವೇರ್‌ ಫೀಟ್‌ನಲ್ಲಿ ನಿರ್ಮಾಣಗೊಂಡಿರೋ ಈ ಬಿಲ್ಡಿಂಗ್‌, ಹತತ್ರ 4,500 ವಜ್ರದ ವ್ಯಾಪಾರ ಕಚೇರಿಗಳನ್ನ ಒಳಗೊಂಡಿರುತ್ತೆ. ಅಂದ್ಹಾಗೆ ಈ ದೊಡ್ಡ ಬಿಲ್ಡಿಂಗ್‌ನ್ನ 35.54 ಎಕ್ರೆ ಜಾಗದಲ್ಲಿ ನಿರ್ಮಿಸಲಾಗಿದೆ. ಇಲ್ಲಿ 9 ಗ್ರೌಂಡ್‌ ಟವರ್‌ಗಳಿದ್ದು, ಈ ಬಿಲ್ಡಿಂಗ್‌ 15 ಫ್ಲೋರ್‌ಗಳನ್ನ ಹೊಂದಿದೆ. ಸದ್ಯ ಈ ಆಫೀಸ್‌ ಉದ್ಘಾಟನೆಗೆ ಎಲ್ಲಾ ರೀತಿಯ ತಯಾರಿಗಳನ್ನ ಮಾಡಲಾಗಿದೆ. ಸುಮಾರು 70,000 ಜನರಿಗೆ ಇನ್ವಿಟಿಶನ್‌ ಕೂಡ ಕಳುಹಿಸಲಾಗಿದೆ. ಇದೀಗಾಗ್ಲೇ ಕೆಲ ಡೈಮಂಡ್‌ ವ್ಯಾಪಾರ ಸಂಸ್ಥೆಗಳು ಈ ಆಫೀಸ್‌ನಲ್ಲಿ ತಮ್ಮ ಕೆಲಸ ಕೂಡ ಸ್ಟಾರ್ಟ್‌ ಮಾಡ್ಕೊಂಡಿದ್ದಾರೆ. ಅಂದ್ಹಾಗೆ ಈ ಬಿಲ್ಡಿಂಗ್‌ ವಿಶ್ವದ ಅತಿದೊಡ್ಡ ಆಫೀಸ್‌ ಅನ್ನೋ ಮಾನ್ಯತೆ ಪಡ್ಕೊಂಡು ಇತ್ತೀಚೆಗಷ್ಟೇ ಗಿನ್ನಿಸ್‌ ದಾಖಲೆಯನ್ನ ಸೇರಿತ್ತು.

-masthmagaa.com

Contact Us for Advertisement

Leave a Reply