ಭೂತಾನ್‌ನ ಥಿಂಪುನಲ್ಲಿ ಆಧುನಿಕ ಆಸ್ಪತ್ರೆ ಉದ್ಘಾಟಿಸಿದ ಪಿಎಂ ಮೋದಿ

masthmagaa.com:

ಭೂತಾನ್‌ಗೆ ಎರಡು ದಿನಗಳ ಕಾಲ ಭೇಟಿ ನೀಡಿರೋ ಪಿಎಂ ನರೇಂದ್ರ ಮೋದಿಯವ್ರು, ರಾಜಧಾನಿ ಥಿಂಪುನಲ್ಲಿ ನೂತನ ಆಸ್ಪತ್ರೆ ಒಂದನ್ನ ಉದ್ಘಾಟಿಸಿದ್ದಾರೆ. ಮಾರ್ಚ್‌ 23ರಂದು ಪಿಎಂ ಮೋದಿ ಮತ್ತು ಭೂತಾನ್‌ ಪ್ರಧಾನಿ ತ್ಶೆರಿಂಗ್‌ ಟೋಬ್ಗೇ ಒಟ್ಟಾಗಿ ಈ ಆಧುನಿಕ ಆಸ್ಪತ್ರೆಯನ್ನ ಉದ್ಘಾಟಿಸಿದ್ದಾರೆ. ಒಟ್ಟು 150 ಬೆಡ್‌ಗಳ ಸೌಲಭ್ಯ ಹೊಂದಿರೋ ಈ ಆಸ್ಪತ್ರೆಯನ್ನ, ಭಾರತದ ಸಹಯೋಗದಲ್ಲಿ ನಿರ್ಮಾಣ ಮಾಡಲಾಗಿದೆ. ಈ ಬಗ್ಗೆ ರಿಯಾಕ್ಟ್‌ ಮಾಡಿರೋ ಪಿಎಂ ಮೋದಿ, ʻಈ ಆಸ್ಪತ್ರೆಯು ಭಾರತ-ಭೂತಾನ್‌ ಅಭಿವೃದ್ಧಿ ಸಹಕಾರದ ನಿದರ್ಶನʼ ಅಂತೇಳಿದ್ದಾರೆ. ಇನ್ನು ತಮ್ಮ ಎರಡು ದಿನಗಳ ಭೂತಾನ್‌ ಭೇಟಿ ಪೂರ್ಣಗೊಂಡಿದ್ದು, ಮೋದಿ ವಾಪಾಸ್‌ ಭಾರತಕ್ಕೆ ಮರಳಿದ್ದಾರೆ.

-masthmagaa.com

Contact Us for Advertisement

Leave a Reply