ಭಾರತದಲ್ಲಿ ಒಲಿಂಪಿಕ್ಸ್‌!? ಮೋದಿ ಹೇಳಿದ್ದೇನು?

masthmagaa.com:

ಯಶಸ್ವಿಯಾಗಿ ಜಿ20 ಶೃಂಗಸಭೆ ಆಯೋಜಿಸಿದ್ದ ಭಾರತ ಈಗ ಒಲಂಪಿಕ್‌ ಆಯೋಜಿಸಲು ಆಸಕ್ತಿ ತೋರಿಸಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿಯವರು ಮಹತ್ವದ ಘೋಷಣೆ ಮಾಡಿದ್ದಾರೆ. ಮುಂಬೈನಲ್ಲಿ ನಡೆದ 141ನೇ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಅಧಿವೇಶನದಲ್ಲಿ ಮಾತಾಡಿರುವ ಮೋದಿ, 2029ರ ಯೂಥ್ ಒಲಿಂಪಿಕ್ಸ್ ಹಾಗೂ 2036ರ ಒಲಿಂಪಿಕ್ಸ್ ಗೇಮ್ಸ್‌ ಆತಿಥ್ಯಕ್ಕೆ ಭಾರತ ಬಿಡ್ಡಿಂಗ್ ನಡೆಸಲಿದೆ ಅಂತ ಘೋಷಿಸಿದ್ದಾರೆ. ಭಾರತ ಒಲಿಂಪಿಕ್ಸ್ ಗೇಮ್ಸ್‌ಗೆ ಆತಿಥ್ಯ ವಹಿಸಲು ಉತ್ಸುಕವಾಗಿದೆ. 140 ಕೋಟಿ ಭಾರತೀಯರ ಹೆಮ್ಮೆಯ ಹಾಗೂ ಕನಸಾಗಿರುವ ಒಲಿಂಪಿಕ್ಸ್ ಆತಿಥ್ಯಕ್ಕೆ ಭಾರತ ಬಿಡ್ ಮಾಡಲಿದೆ. ಜೊತೆಗೆ IOC ಬೆಂಬಲದೊಂದಿಗೆ ಭಾರತ ಈ ಮಹತ್ವದ ಮೈಲಿಗಲ್ಲು ಸಾಧಿಸಲಿದೆ ಅಂಥ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 

-masthmagaa.com

Contact Us for Advertisement

Leave a Reply