ನರೇಂದ್ರ ಮೋದಿ ಸಮುದ್ರ ಶಪಥ! ಬಲ್ಗೇರಿಯಾ ಅಧ್ಯಕ್ಷರಿಗೆ ಸಂದೇಶ!

masthmagaa.com:

ಅರಬ್ಬಿ ಸಮುದ್ರ ಮತ್ತು ಹಿಂದೂ ಮಹಸಾಗರದಲ್ಲಿ ಆಗ್ತಿರೋ ಉಗ್ರದಾಳಿಗಳು ಮತ್ತು ಕಡಲ್ಗಳ್ಳರ ಹಾವಳಿ ಬಗ್ಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಮಾತಾಡಿದ್ದಾರೆ. ಸಮುದ್ರ ರಕ್ಷಣೆಗೆ ಭಾರತ ಯಾವಾಗಲೂ ಸಿದ್ದ ಅಂತ ಶಪಥ ಮಾಡಿದ್ದಾರೆ. ಇತ್ತೀಚಿಗಷ್ಟೇ ಮಾಲ್ಟಾ ಮೂಲದ ವ್ಯಾಪಾರಿ ಹಡಗನ್ನ ಭಾರತೀಯ ನೌಕಾ ಪಡೆ ರಕ್ಷಣೆ ಮಾಡಿತ್ತು. ಅಲ್ಲಿ ಬಲ್ಗೇರಿಯಾ ಪ್ರಜೆಗಳೂ ಇದ್ರು. ಸೋ ನಮ್ಮ ಪ್ರಜೆಗಳನ್ನ ರಕ್ಷಣೆ ಮಾಡಿದ್ದಕ್ಕೆ ಭಾರತಕ್ಕೆ ಧನ್ಯವಾದ ಅಂತ ಬಲ್ಗೇರಿಯಾ ಅಧ್ಯಕ್ಷ ರಮೆನ್‌ ರಾಧೇವ್‌ ಹೇಳಿಕೆ ಕೊಟ್ಟಿದ್ರು. ಇದಕ್ಕೆ ಪ್ರಧಾನಿ ಮೋದಿ ರಿಯಾಕ್ಟ್‌ ಮಾಡಿದ್ದಾರೆ. ʻಹಿಂದೂ ಮಹಾಸಾಗರದಲ್ಲಿ ಮುಕ್ತ ನೌಕಾಯಾನಕ್ಕೆ ನಾವು ಹೋರಾಡ್ತೀವಿ. ಕಡಲ್ಗಳ್ಳತನ ಹಾಗೂ ಭಯೋತ್ಪಾದನೆ ವಿರುದ್ಧ ಭಾರತ ಯಾವಾಗಲೂ ತನ್ನ ಹೋರಾಟವನ್ನ ಮುಂದುವರೆಸುತ್ತೆ. ಇದಕ್ಕೆ ನಾವು ಬದ್ದರಾಗಿದ್ದೇವೆʼ ಅಂತ ಮೋದಿ ತಿಳಿಸಿದ್ದಾರೆ. ಜೊತೆಗೆ ʻಬಲ್ಗೇರಿಯಾದ ಅಧ್ಯಕ್ಷರೇ…ನಿಮ್ಮ ಸಂದೇಶವನ್ನ ನಾನು ಅಪ್ರಿಷಿಯೇಟ್‌ ಮಾಡ್ತೀನಿ. ಬಲ್ಗೇರಿಯಾದ 7 ಪ್ರಜೆಗಳು ಸೇಫಾಗಿದ್ದು ಆದಷ್ಟು ಬೇಗ ತಮ್ಮ ಮನೆಗೆ ವಾಪಾಸ್ಸಾಗಲಿದ್ದಾರೆ ಅನ್ನೋ ಬಗ್ಗೆ ನಮಗೆ ಸಂತೋಷವಿದೆʼ ಅಂತ ಹೇಳಿದ್ದಾರೆ. ಅಂದ್ಹಾಗೆ ಅರಬ್ಬೀ ಸಮುದ್ರ ಹಾಗೂ ಹಿಂದೂ ಮಹಾಸಾಗರದಲ್ಲಿ ಇತ್ತೀಚಿಗೆ ಸಾಕಷ್ಟು ಸಲ ಕಡಲ್ಗಳ್ಳತನ ನಡೆದಿತ್ತು. ಆಗೆಲ್ಲಾ ಭಾರತೀಯ ನೌಕಾ ಪಡೆ ಹಡಗುಗಳ ರಕ್ಷಣೆ ಮಾಡಿತ್ತು. ಕೆಲವಾರಗಳ ಹಿಂದಷ್ಟೇ ಕೆಂಪು ಸಮುದ್ರದಲ್ಲಿ ಯೆಮೆನ್‌ನ ಹೌತಿ ದಾಳಿಗೆ ಒಳಗಾದ ವ್ಯಾಪಾರಿ ಹಡಗನ್ನ ಭಾರತ ಕಾಪಾಡಿತ್ತು. ಏಡೆನ್‌ ಕೊಲ್ಲಿ ಮತ್ತು ಸೊಮಾಲಿಯಾ ಭಾಗದಲ್ಲಿ ಹೈಜಾಕ್‌ ಆಗಿರೋ ಹಡಗುಗಳಿಗೂ ಸಹಾಯ ಮಾಡಿತ್ತು. ಸಧ್ಯ ಭಾರತೀಯ ನೇವಿಯ ಈ ಎಲ್ಲಾ ಸಕ್ಸೆಸ್‌ಫುಲ್‌ ಕಾರ್ಯಚರಣೆಗೆ ಐಎನ್‌ಎಸ್‌ ಚೆನೈ ಮತ್ತು ಐಎನ್‌ಎಸ್‌ ಕೋಲ್ಕತ್ತಾ ಯುದ್ಧನೌಕೆಗಳು ಸೂಪರ್‌ಪವರ್‌ ಆಗಿ ಸಾಥ್‌ ಕೊಡ್ತಿವೆ. ಅಲ್ದೆ ಅರಬ್ಬಿ ಸಮುದ್ರದಲ್ಲಿ ಭಾರತ ಈಗಾಗಲೇ ಹಿಂದಿಗಿಂತ ಹೆಚ್ಚು ತನ್ನ ಸೇನಾ ಉಪಸ್ಥಿತಿ ಹೆಚ್ಚಿಸಿದೆ…ಭದ್ರತೆ ಜಾಸ್ತಿ ಮಾಡಿದೆ. ಅಲ್ದೆ ಲಕ್ಷದ್ವೀಪದಲ್ಲಿ ಡಾರ್ನಿಯರ್‌ ಏರ್‌ಕ್ರಾಫ್ಟ್‌ ಮತ್ತು ಎಎಲ್‌ಎಚ್‌ ಧ್ರುವ್‌ ಚಾಪರ್‌ಗಳ ಸಹಾಯದಿಂದ ಆ ಭಾಗದ ಸುತ್ತಲೂ ಕಣ್ಣಿಡ್ತಾ ಇದೆ. ವಿಶ್ವದ ಬ್ಯುಸಿಯೆಸ್ಟ್‌ ಸಮುದ್ರ ಮಾರ್ಗ ಆಗಿರೋ ಗಲ್ಪ್‌ ತೀರದಲ್ಲೂ ಭಾರತ ದೊಡ್ಡ ಮಟ್ಟದ ಸೇನಾ ಕಾರ್ಯಾಚರಣೆ ಮಾಡ್ತಿದ್ದು ಇದನ್ನ ನಾವು ಮುಂದುವರೆಸ್ತೇವೆ ಅಂತ ಮೋದಿ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply