ವಂಚಕ ಚೋಕ್ಸಿಗೆ ಸಂಕಷ್ಟ ಶುರು..! ಸದ್ಯದಲ್ಲೇ ಭಾರತಕ್ಕೆ ಗಡೀಪಾರು..!

ನ್ಯೂಯಾರ್ಕ್‍:  ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣ ಸಂಬಂಧ ಭಾರತಕ್ಕೆ ಬೇಕಿರುವ ಮೆಹುಲ್ ಚೌಕ್ಸಿಗೆ ಸಂಕಷ್ಟ ಎದುರಾಗಿದೆ. ಸಾವಿರಾರು ಕೋಟಿ ವಂಚಿಸಿರುವ ಮೆಹುಲ್ ಚೋಕ್ಸಿ, 2018ರಲ್ಲಿ ಆಂಟಿಗುವಾದಲ್ಲಿ ಹೋಗಿ ನೆಲೆಸಿದ್ದಾನೆ. ಅಲ್ಲದೆ ಅಲ್ಲಿನ ನಾಗರಿಕತ್ವವನ್ನೂ ಪಡೆದಿದ್ದಾನೆ. ಆದ್ರೆ ಆಂಟಿಗುವಾ ಜೊತೆಗೆ ಭಾರತದ ಗಡೀಪಾರು ಒಪ್ಪಂದ ಇಲ್ಲ. ಈ ಬಗ್ಗೆ ನ್ಯೂಯಾರ್ಕ್‍ನಲ್ಲಿ ಮಾತನಾಡಿರುವ ಆಂಟಿಗುವಾ ಪ್ರಧಾನಿ, ಮೆಹುಲ್ ಚೋಕ್ಸಿಯಿಂದ ನಮ್ಮ ದೇಶಕ್ಕೆ ಏನೂ ಆಗಬೇಕಿಲ್ಲ. ಒಂದು ಸಾರಿ ಕಾನೂನು ಪ್ರಕ್ರಿಯೆ ಮುಗಿದ ಕೂಡಲೇ ಅವರನ್ನು ಭಾರತಕ್ಕೆ ಗಡೀಪಾರು ಮಾಡಲಾಗುತ್ತೆ ಎಂದಿದ್ದಾರೆ. ಅಂದ್ರೆ ಇನ್ನು ಕೆಲವೇ ಸಮಯದಲ್ಲಿ ಮೆಹುಲ್ ಚೋಕ್ಸಿ ಭಾರತಕ್ಕೆ ವಾಪಸ್ ಆಗಿ, ಕಾನೂನು ಕುಣಿಕೆಯಲ್ಲಿ ಸಿಲುಕಲಿದ್ದಾನೆ.

Contact Us for Advertisement

Leave a Reply