ಸ್ವತಂತ್ರವಾಗುತ್ತಾ ಪಾಕ್‌ ಆಕ್ರಮಿತ ಕಾಶ್ಮೀರ?

masthmagaa.com:

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಜುಲೈ 25ರಂದು ಚುನಾವಣೆ ನಡೆಯಲಿದ್ದು, ಇಮ್ರಾನ್ ಖಾನ್ ಕೊರೋನಾ ನಡುವೆಯೂ ಪ್ರಚಾರ ಕೈಗೊಂಡಿದ್ದಾರೆ. ಪ್ರಚಾರದ ವೇಳೆ ಮಾತನಾಡಿದ ಅವರು, ವೋಟಿಗಾಗಿ ಒಂದು ಮಾತಿನ ಬಲೆ ಬೀಸಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರದ ಜನರು ಪಾಕಿಸ್ತಾನದ ಜೊತೆಗೆ ಸೇರಬೇಕಾ..? ಅಥವಾ ಸ್ವತಂತ್ರವಾಗಿ ಇರಬೇಕಾ ಅನ್ನೋದನ್ನ ಜನರೇ ನಿರ್ಧರಿಸುತ್ತಾರೆ. ಇದಕ್ಕಾಗಿ ನಮ್ಮ ಸರ್ಕಾರ ಜನಮತ ಸಂಗ್ರಹಿಸುತ್ತೆ ಅಂತ ಘೋಷಿಸಿದ್ದಾರೆ. ಅಲ್ಲದೆ ಇತ್ತೀಚೆಗೆ ವಿಪಕ್ಷ ನಾಯಕರು ಪಾಕ್ ಆಕ್ರಮಿತ ಕಾಶ್ಮೀರವನ್ನು ಪಾಕಿಸ್ತಾನದ ಒಂದು ಪ್ರಾಂತ್ಯವನ್ನಾಗಿ ಮಾಡಲು ಸಿದ್ಧತೆ ನಡೆಸಲಾಗ್ತಿದೆ ಅಂತ ಆರೋಪಿಸಿದ್ರು. ಈ ಆರೋಪವನ್ನು ಕೂಡ ಇಮ್ರಾನ್ ಖಾನ್ ತಳ್ಳಿ ಹಾಕಿದ್ದಾರೆ. ಪಿಒಕೆಯನ್ನು ಪ್ರತ್ಯೇಕ ಪಾಕ್​ನ ಪ್ರತ್ಯೇಕ ಪ್ರಾಂತ್ಯ ಮಾಡೋ ವಿಚಾರ ಎಲ್ಲಿಂದ ಬಂತು ಅನ್ನೋದು ನನಗೆ ಗೊತ್ತಿಲ್ಲ. 1948ರಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ 2 ಪ್ರಸ್ತಾವನೆಗಳಿದ್ವು. ಅದ್ರಲ್ಲಿ ಪಿಒಕೆಯ ಜನರು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಅಂದ್ರೆ ಜನರ ಮುಂದೆ ಭಾರತ ಅಥವಾ ಪಾಕಿಸ್ತಾನಕ್ಕೆ ಸೇರಲು ಅವಕಾಶ ನೀಡಲಾಗಿದೆ ಅಂತ ಹೇಳಿದ್ದಾರೆ. ಅಂದ್ರೆ ಮೊದಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಪ್ರಕಾರ ಜನಮತ ಸಂಗ್ರಹ ಮಾಡಲಾಗುತ್ತೆ. ಭಾರತದ ಜೊತೆಗೆ ಇರಬೇಕಾ ಅಥವಾ ಪಾಕ್ ಜೊತೆಗೆ ಇರಬೇಕಾ ಅಂತ.. ಆಮೇಲೆ ಪಾಕ್​ ಜೊತೆಗೆ ಇರಲು ಪಿಒಕೆ ಜನ ಮತ ಹಾಕಿದ್ರೆ ಮತ್ತೊಂದು ಜನಮತ ಸಂಗ್ರಹ ನಡೆಸಲಾಗುತ್ತೆ. ಅದ್ರಲ್ಲಿ ಸ್ವತಂತ್ರವಾಗಿ ಇರಬೇಕಾ ಅಥವಾ ಪಾಕ್ ಜೊತೆಗೆ ಇರಬೇಕಾ ಅನ್ನೋದನ್ನ ಪಿಒಕೆಯ ಜನರೇ ನಿರ್ಧರಿಸಬಹುದು ಅಂತ ಹೇಳಿದ್ದಾರೆ. ಅಂದ್ರೆ ಎರಡೆರಡು ಜನಮತ ಸಂಗ್ರಹ ಮಾಡೋದಾಗಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಘೋಷಿಸಿದ್ದಾರೆ.

-masthmagaa.com

Contact Us for Advertisement

Leave a Reply