ಸೈಕಲ್ ರೇಸ್​ ವೇಳೆ ಯಡವಟ್ಟು ಮಾಡ್ಕೊಂಡು ಜೈಲು ಸೇರಿದ ಪ್ರೇಕ್ಷಕಿ!

masthmagaa.com:

ಸೈಕಲ್ ರೇಸ್​ ನೋಡೋಕೆ ಅಂತ ಹೋಗಿದ್ದ ಪ್ರೇಕ್ಷಕಿಯೊಬ್ಬಳು ಗೊತ್ತಿಲ್ಲದೇ ಮಾಡಿದ ಯಡವಟ್ಟಿಗೆ ಈಗ ಜೈಲು ಸೇರಿದ್ದಾಳೆ. ಅಂದ್ಹಾಗೆ ಆಗಿದ್ದು ಇಷ್ಟೇ.. ಜೂನ್ 24ರಂದು ಫ್ರಾನ್ಸ್​​ನಲ್ಲಿ ಟೂರ್​ ಡೆ ಫ್ರಾನ್ಸ್ ಅನ್ನೋ ಸೈಕಲ್​ ರೇಸ್​ನ​ ಮೊದಲ ಹಂತ ನಡೀತಿತ್ತು. ಜಗತ್ತಿನಲ್ಲಿ ನಡೆಯೋ ಅತಿದೊಡ್ಡ ಸೈಕ್ಲಿಂಗ್ ಈವೆಂಟ್​​ ಅಂದ್ರೆ ಅದು ಟೂರ್​ ಡೆ ಫ್ರಾನ್ಸ್​. ಇಷ್ಟುದೊಡ್ಡ ಈವೆಂಟ್​ ವೇಳೆ ಪ್ರೇಕ್ಷಕಿಯೊಬ್ಬಳು ರಟ್ಟಿನ ಭಿತ್ತಿಪತ್ರ ಇಟ್ಕೊಂಡು ಕ್ಯಾಮರಾಗೆ ಪೋಸ್​ ನೀಡ್ತಾ ಇದ್ಳು. ಆದ್ರೆ ಆಕೆಯ ಭಿತ್ತಿಪತ್ರ ಸೈಕ್ಲಿಸ್ಟ್​ಗಳ ಟ್ರಾಕ್​​ಗೆ ಸ್ವಲ್ಪ ಅಡ್ಡ ಬಂದಿತ್ತು. ಅದೇ ಟೈಮಲ್ಲಿ ಸೈಕ್ಲಿಸ್ಟ್​ಗಳ ಗುಂಪು ಅಲ್ಲಿಗೆ ಬಂದಿದೆ. ಆಗ ಒಬ್ಬ ಸೈಕ್ಲಿಸ್ಟ್​ಗೆ ಆಕೆ ಇಟ್ಕೊಂಡಿದ್ದ ಕಾರ್ಡ್​​ಬೋರ್ಡ್​ ಸೈನ್​ ತಾಗಿ ಆತ ಅಲ್ಲೇ ಅಡ್ಡ ಬಿದ್ದಿದ್ದಾನೆ. ಇದರ ಬೆನ್ನಲ್ಲೇ ಆತ ಹಿಂದೆ ಇದ್ದೋರೆಲ್ಲಾ ಒಬ್ಬರಾದ ಮೇಲೊಬ್ಬರಂತೆ ಬಿದ್ದಿದ್ದಾರೆ. ಇದೀಗ ಆಕೆಯ ಮೇಲೆ ಬೇರೆಯವರ ಜೀವವನ್ನ ಅಪಾಯಕ್ಕೆ ತಳ್ಳಿದ ಕೇಸ್​​ನಲ್ಲಿ ಅರೆಸ್ಟ್ ಮಾಡಲಾಗಿದೆ.

-masthmagaa.com

Contact Us for Advertisement

Leave a Reply