ಅಮೆರಿಕನ್ ಟಿವಿಯಲ್ಲಿ ಹವಾಮಾನ ವರದಿ ವೇಳೆ ನೀಲಿ ಚಿತ್ರ ಪ್ರದರ್ಶನ

masthmagaa.com:

ಅಮೆರಿಕ CBS ಟಿವಿಯ ಅಂಗಸಂಸ್ಥೆಯಾದ ಕ್ರೆಮ್ ಟಿವಿಯಲ್ಲಿ ಹವಾಮಾನ ವರದಿ ವೇಳೆ ನೀಲಿ ಚಿತ್ರ ಪ್ರದರ್ಶನ ಆಗಿದೆ. ಆಂಕರ್ ಮಿಶೆಲ್ ಬಾಸ್ ಮಳೆ, ತಾಪಮಾನ ಸಂಬಂಧ ಹೇಳ್ತಾ ಇದ್ರೆ ಅವರ ಹಿಂದೆ ಸ್ಕ್ರೀನ್ ನಲ್ಲಿ ಹಸಿ ಹಸಿ ಸೀನ್ ಪ್ರಸಾರ ಆಗಿದೆ. ಇದನ್ನ ಚಾನೆಲ್‌ನವ್ರು ಗಮನಿಸುವಷ್ಟರಲ್ಲಿ 13 ಸೆಕೆಂಡ್‌ನಷ್ಟು ಮಸಾಲೆ ಪದಾರ್ಥ ಆನ್ ಏರ್ ಹೋಗಿ ಆಗಿತ್ತು. ಈ ಬಗ್ಗೆ ವೀಕ್ಷಕರ ಕ್ಷಮೆ ಕೇಳಿರೋ ಕ್ರೆಮ್ ಟಿವಿ, ನಮ್ಮಿಂದ ತಪ್ಪಾಗಿದೆ. ಇನ್ಮೇಲೆ ಹೀಗಾಗದಂತೆ ನೋಡ್ಕೋತೀವಿ ಅಂತ ಹೇಳಿದೆ. ಈ ಹಿಂದೆ 2017ರಲ್ಲಿ ಬ್ರಿಟಿಷರ ಹೆಮ್ಮೆಯ BBC ನ್ಯೂಸ್ ಟೆಲಿಕಾಸ್ಟ್ ವೇಳೆಕೂಡ ಹಿಂದೆ ಪ್ರೊಡಕ್ಷನ್ ಕಂಟ್ರೋಲ್ ರೂಮ್‌ನಲ್ಲಿದ್ದ ಸಿಬ್ಬಂದಿ ಅಶ್ಲೀಲ ದೃಶ್ಯ ನೋಡ್ತಾ ಇದ್ದಿದ್ದನ್ನ ಕೆಲ ‘ನೀಲಿ’ಗಣ್ಣಿನ ವೀಕ್ಷಕರು ಕಂಡು ಹಿಡಿದು ವೈರಲ್ ಮಾಡಿದ್ದರು.

-masthmagaa.com

Contact Us for Advertisement

Leave a Reply