ಗಣರಾಜ್ಯೋತ್ಸವ ಪರೇಡ್: ತ.ನಾಡು ಹಾಗೂ ಪ.ಬಂಗಾಳ ಸ್ತಬ್ಧ ಚಿತ್ರ ಡ್ರಾಪ್!

masthmagaa.com:

ಈ ಬಾರಿಯ ಗಣರಾಜ್ಯೋತ್ಸವ ಪರೇಡ್ ನಿಂದ ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದ ಸ್ತಬ್ಧ ಚಿತ್ರಗಳನ್ನ ಡ್ರಾಪ್ ಮಾಡಿರೋದು ವಿವಾದವಾಗಿದೆ. ಈ ಸಂಬಂಧ ತಮಿಳುನಾಡು ಸಿಎಂ ಸ್ಟಾಲಿನ್ ಅಂತೂ ನಮ್ದು ಡ್ರಾಪ್ ಮಾಡಬೇಡಿ. ಸೇರಿಸಿಕೊಳ್ಳಿ ಅಂತ ಪತ್ರವನ್ನೇ ಬರೆದಿದ್ದಾರೆ. ಪಶ್ಚಿಮ ಬಂಗಾಳ ಕೂಡ ಈ ಸಂಬಂಧ ಇದು ಅನ್ಯಾಯ ಅಂತ ಗಲಾಟೆ ಮಾಡಿದೆ. ಹೀಗಾಗಿ ಖುದ್ದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಎರಡೂ ರಾಜ್ಯಗಳ ಸಿಎಂಗಳಿಗೆ ಲೆಟರ್ ಬರೆದು ವಿವರಣೆ ಕೊಟ್ಟಿದ್ದಾರೆ. ನಿಮ್ ರಾಜ್ಯದ್ದೇ ಡ್ರಾಪ್ ಮಾಡಬೇಕು ಅಂತ ಮಾಡಿದ್ದಲ್ಲ. ಸೆಲೆಕ್ಟ್ ಆಗಿರೋ 12 ಟ್ಯಾಬ್ಲೋಗಳಲ್ಲಿ ನಿಮ್ದು ಇಲ್ಲ ಅಷ್ಟೆ. ಎಲ್ಲ ರಾಜ್ಯಗಳದ್ದೂ ಪ್ರತೀ ಸಲ ಸೆಲೆಕ್ಟ್ ಆಗಲ್ಲ. ಪಶ್ಚಿಮ ಬಂಗಾಳದ್ದು 2016, 2017,2019, & 2021ರಲ್ಲಿ ಸೆಲೆಕ್ಟ್ ಆಗಿತ್ತು. ತಮಿಳುನಾಡಿಂದು 2017, 2019,2020, & 2021ರಲ್ಲಿ ಸೆಲೆಕ್ಟ್ ಆಗಿತ್ತು. ಪ್ರತೀ ಸಲ ಕೆಲ ರಾಜ್ಯಗಳದ್ದು ಸೆಲೆಕ್ಟ್ ಆಗುತ್ತೆ. ಅದರಲ್ಲಿ ವಿವಾದ ಮಾಡೋದು ಏನೂ ಇಲ್ಲ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply