Ponniyin Selvan 2: ಮೊದಲ ದಿನವೇ ಭರ್ಜರಿ ಕಲೆಕ್ಷನ್ !

masthmagaa.com:

ವಿಕ್ರಮ್, ಐಶ್ವರ್ಯ ರೈ, ಕಾರ್ತಿ, ಜಯಂ ರವಿ ಮತ್ತು ತ್ರಿಶಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ ಐತಿಹಾಸಿಕ ಚಿತ್ರ ‘ಪೊನ್ನಿಯಿನ್ ಸೆಲ್ವನ್ 2’ ನಿನ್ನೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಚಿತ್ರದ ಎರಡನೇ ಭಾಗವು ಪ್ರೇಕ್ಷಕರಿಂದ ಸಾಕಷ್ಟು ಪ್ರೀತಿಯನ್ನು ಗಳಿಸಿದೆ ಮತ್ತು ಚಲನಚಿತ್ರ ಅಭಿಮಾನಿಗಳು ಮತ್ತು ವಿಮರ್ಶಕರಿಂದ ಒಳ್ಳೆ ಮೆಚ್ಚುಗೆಯನ್ನು ಪಡೆಯುತ್ತಿದೆ. ವರದಿಯ ಪ್ರಕಾರ, ಚಿತ್ರವು ಬಿಡುಗಡೆಯಾದ 1 ನೇ ದಿನದಂದು ಬಾಕ್ಸ್ ಆಫೀಸ್‌ನಲ್ಲಿ30 ಕೋಟಿ ಗಳಿಸಬಹುದುದು ಅಂತ ಅಂದಾಜು ಮಾಡಲಾಗಿತ್ತು. ಆದರೆ ನಿರೀಕ್ಷೆಯನ್ನು ಮುರಿದು, ಮಣಿರತ್ನಂ ನಿರ್ದೇಶನದ ಚಿತ್ರ ಮೊದಲನೇ ದಿನ ಬಾಕ್ಸ್ ಆಫೀಸ್‌ನಲ್ಲಿ ವಿಶ್ವಾದ್ಯಂತ 38 ಕೋಟಿ ಗಳಿಸುವಲ್ಲಿ ಯಶಸ್ವಿಯಾಗಿದೆ.

‘ಪೊನ್ನಿಯಿನ್ ಸೆಲ್ವನ್ 2’ ಒಳ್ಳೆ ಓಪನಿಂಗ್ ಪಡೆಯಿತು. ಆದರೆ ಪೊನ್ನಿಯಿನ್ ಸೆಲ್ವನ್- 1 ಚಿತ್ರದ ದಾಖಲೆಯನ್ನ ಬೀಟ್‌ ಮಾಡೋಕೆ ಆಗಲಿಲ್ಲ. ಸೆಪ್ಟೆಂಬರ್ 30, 2022 ರಂದು ಬಿಡುಗಡೆಯಾದ ‘ಪೊನ್ನಿಯಿನ್ ಸೆಲ್ವನ್ 1’ ಬಿಡುಗಡೆಯಾದ ಮೊದಲ ದಿನ 80 ಕೋಟಿ ರೂ. 4,500 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಆದರೆ ಪೊನ್ನಿಯಿನ್ ಸೆಲ್ವನ್ 2, 3,200 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.

ಕಲ್ಕಿ ಕೃಷ್ಣಮೂರ್ತಿಯವರ ಕಾದಂಬರಿಯನ್ನು ಅಳವಡಿಸಿಕೊಂಡ ಈ ಸಿನಿಮಾವನ್ನು 5 ಪುಸ್ತಕಗಳಿಂದ ‘ಪೊನ್ನಿಯಿನ್ ಸೆಲ್ವನ್ ಬಾಗ ಒಂದು ಮತ್ತು ಎರಡು” ಅಂತ ಮಾಡಲಾಗಿದೆ. ಚಿತ್ರದಲ್ಲಿ ಐಶ್ವರ್ಯ ಲಕ್ಷ್ಮಿ, ಶೋಭಿತಾ ಧೂಳಿಪಾಲ, ಜಯರಾಂ, ಶರತ್‌ಕುಮಾರ್, ಪಾರ್ತಿಬನ್, ವಿಕ್ರಮ್ ಪ್ರಭು ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಎಆರ್ ರೆಹಮಾನ್ ಸಂಗೀತ ಸಂಯೋಜನೆ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply