ಮುಸ್ಲಿಮರು ಬಿಜೆಪಿಗೆ ಓಟ್ ಹಾಕಬೇಡಿ: ಪ್ರಕಾಶ್ ಹುಕ್ಕೇರಿ ಫರ್ಮಾನು..?

ಮುಸ್ಲಿಮರು ಬಿಜೆಪಿಗೆ ಓಟ್ ಹಾಕೋದೇ ಬೇಕಿಲ್ಲ ಎಂದಿದ್ದ ಸಚಿವ ಕೆ.ಎಸ್.ಈಶ್ವರಪ್ಪಗೆ ಕಾಂಗ್ರೆಸ್ ನಾಯಕ ಪ್ರಕಾಶ್ ಹುಕ್ಕೇರಿ ಟಾಂಗ್ ಕೊಟ್ಟಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಬಿಜೆಪಿಗೆ ಮುಸ್ಲಿಮರ ಓಟು ಬೇಡ ಅಂತ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಈ ಬಾರಿ ಮುಸ್ಲಿಮರು ಬಿಜೆಪಿಗೆ ಓಟ್ ಹಾಕಬೇಡಿ. ಈ ಮೂಲಕ ಬಿಜೆಪಿಗೆ ಪಾಠ ಕಲಿಸಿ ಅಂತ ಹೇಳಿದ್ದಾರೆ. ಈಶ್ವರಪ್ಪ ಓರ್ವ ರಾಜಕೀಯ ನಾಯಕನಾಗಿ ಹೀಗೆ ಮಾತನಾಡುತ್ತಾರೆ. ಮುಸ್ಲಿಮರು ಈ ದೇಶದವರಲ್ವಾ..? ಅವರೇನು ಹೊರಗಿನವರಾ..? ಅಂತ ಪ್ರಶ್ನಿಸಿದ್ರು.

ಶ್ರೀರಾಮಸೇನೆಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಈಶ್ವರಪ್ಪ. ನಾನು ಈವರೆಗೆ ನಮ್ಮ ಕ್ಷೇತ್ರದಲ್ಲಿ ಮುಸ್ಲಿಮರ ಓಟು ಕೇಳಲು ಕೂಡ ಹೋಗಿಲ್ಲ. ದೇಶಭಕ್ತಿ ಇರುವ ಮುಸ್ಲಿಮರು ಬಿಜೆಪಿಗೆ ಓಟ್ ಹಾಕ್ತಾರೆ. ಪಾಕಿಸ್ತಾನ ಬೆಂಬಲಿಸುವ ಮುಸ್ಲಿಮರು ಬಿಜೆಪಿಗೆ ಓಟ್ ಹಾಕಲ್ಲ ಎಂದು ಹೇಳಿದ್ದರು.

Contact Us for Advertisement

Leave a Reply